ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಪೋಷಕರು ಬುದ್ಧಿ ಹೇಳಿದ್ದಕ್ಕೆ 13ರ ಬಾಲಕಿ ನೇಣಿಗೆ ಶರಣು

ಮೂಡುಬಿದಿರೆ: ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಕೋಪಗೊಂಡು ಮಾನಸಿಕವಾಗಿ ನೊಂದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮೂಡುಮಾರ್ನಾಡಿನ ಗುಡ್ಡದ ಮೇಲು ಎಂಬಲ್ಲಿ ನಡೆದಿದೆ.

ಕರುಣಾಕರ ಹಾಗೂ ಸುಶೀಲಾ ದಂಪತಿಯ ಪುತ್ರಿ ಪೂಜಾ (13) ಆತ್ಮಹತ್ಯೆ ಶರಣಾದ ಬಾಲಕಿ. ಪೂಜಾ ಗುರುವಾರ ಮಧ್ಯಾಹ್ನ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ಸಣ್ಣ ವಿಚಾರಕ್ಕೆ ಅವರೊಂದಿಗೆ ಜಗಳವಾಡಿ ಹೊಡೆದು ತೊಂದರೆ ನೀಡುತ್ತಿದ್ದಳು. ಸಣ್ಣ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಸಹೋದರಿ ಬುದ್ಧಿ ಮಾತು ಹೇಳಿದ್ದಾರೆ. ಇದರಿಂದಾಗಿ ಖಿನ್ನತೆಗೆ ಒಳಗಾದ ಪೂಜಾ ಮನೆ ಬಳಿ ಇರುವ ಹಾಡಿಯಲ್ಲಿ ಮರದ ಕೊಂಬೆಗೆ ಚೂಡಿದಾರ್ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

09/10/2020 02:07 pm

Cinque Terre

8.72 K

Cinque Terre

0

ಸಂಬಂಧಿತ ಸುದ್ದಿ