ಮುಂಡ್ಕೂರು :ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್ ಹಮ್ಮಿಕೊಂಡ ವಾತ್ಸಲ್ಯ ಕಾರ್ಯಕ್ರಮದ ಅಂಗವಾಗಿ ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಮಂಗಳೂರಿನ ಕ್ಷೇಮ ದ ಸಹಾಯಕ ಪ್ರಾಧ್ಯಾಪಕ ಡಾ. ಪಿ. ಕಿಶನ್ ಆಳ್ವ ಉದ್ಘಾಟಿಸಿದರು.
ಮುಂಡ್ಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಜರಗಿದ ವಾತ್ಸಲ್ಯ ಕಾರ್ಯಕ್ರಮದಲ್ಲಿ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿಗಳ ಎಲ್ಲಾ ಪುಟಾಣಿಗಳಿಗೆ 5 ಉಪಯುಕ್ತ ವಸ್ತುಗಳನ್ನೊಳಗೊಂಡ ಕಿಟ್‌ಗಳನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವೀಂದ್ರ ಹೆಚ್.ಶೆಟ್ಟಿ ವಿತರಿಸಿದರು.
ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ್ ರಾವ್ ಕೊರೋನಾ ತಡೆಗಟ್ಟುವಿಕೆ ಮತ್ತು ಲಸಿಕಾ ಕಾರ್ಯಕ್ರಮದ ಮಾಹಿತಿ ನೀಡಿದರು.ವೈದ್ಯಾಧಿಕಾರಿ ಡಾ.ಸ್ಮಿತಾ, ಕಾರ್ಕಳ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸೌಜನ್ಯಾ, ಶಿಕ್ಷಣ ಸಂಯೋಜಕ ಚಂದ್ರಕಾಂತ ಡೇಸಾ, ಬೆಳ್ಮಣ್ ಕ್ಷೇತ್ರದ ನಿಕಟಪೂರ್ವ ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಮುಂಡ್ಕೂರು ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು, ಉಪಾಧ್ಯಕ್ಷ ಭಾಸ್ಕರ ಎಮ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮುಂಡ್ಕೂರು ವಿ.ಎಸ್.ಎಸ್.ಎನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರುಣ್‌ಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ರಘುವೀರ್‌ಶೆಣೈ ಪ್ರಸ್ತಾವನೆಗೈದರು. ಎಂ.ದೇವಪ್ಪ ಸಪಳಿಗ ವಂದಿಸಿದರು.
Kshetra Samachara
28/07/2021 09:17 pm