ಮುಲ್ಕಿ: ಕೃಷಿಕರು ಭತ್ತ ಬೇಸಾಯದ ಜೊತೆಗೆ ಅಡಿಕೆ , ತೆಂಗು, ಕಾಳು ಮೆಣಸು ಬೆಳೆಸಿದಲ್ಲಿ ಲಾಭದಾಯಕವಾಗಲಿದ್ದು ಜೊತೆಗೆ ಸರ್ಕಾರದಿಂದ ಸಿಗುವ ಹಲವಾರು ಕೃಷಿ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ವಿನಯ ತೆಂಗು ಬೆಳೆಗಾರರ ರೈತ ಉತ್ಪಾದಕರ ಕಂಪನಿಯ ಪ್ರೀತಮ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಸಮೀಪದ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ವಠಾರದಲ್ಲಿ ನಡೆದ ರೈತರ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿ ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗಬೇಕು, ಈ ನಿಟ್ಟಿನಲ್ಲಿ ಮುಲ್ಕಿ ಹೋಬಳಿ ಮಟ್ಟದಲ್ಲಿ ರೈತರಿಗೆ ಅನುಕೂಲವಾಗುವ ಸಂಘಟನೆಯ ಅಗಬೇಕು ಅದಕ್ಕೆ ಕೃಷಿಕರ ಬೆಂಬಲ ಸಹಕಾರ ಬೇಕು ಎಂದರು.
ರೈತ ಸಂಘಟನೆಯ ನಿರ್ದೆಶಕ ಚರಣ್ ಜೆ. ಶೆಟ್ಟಿ ಕುಳಾಯಿ ಗುತ್ತು ಮಾತನಾಡಿ ರೈತರನ್ನು ಸಂಘಟಿಸಿ ಅವರ ಸಾಮರ್ಥ್ಯ ಬಲಿಷ್ಠ ಗೊಳಿಸಬೇಕು, ಅದಕ್ಕೆ ರೈತರಿಗೆ ಸೂಕ್ತ ಮಾಹಿತಿ ಆಧುನಿಕ ತಂತ್ರಜ್ಞಾನ ಕೃಷಿ ಪದ್ದತಿಗಳನ್ನು ಇನ್ನಷ್ಟು ಪರಿಚಯಿಸಿ ಸದೃಢಗೊಳಿಸಬೇಕು ಎಂದರು.
ಪ್ರಸನ್ನ ಎಲ್ ಶೆಟ್ಟಿ ಅತ್ತೂರು ಗುತ್ತು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/09/2022 10:33 am