ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ:ಸೇತುವೆ ದಾಟಲು ಹೋಗಿ ಆಕಾಶ ನೋಡಿದ ಲಾರಿ..!

ಬಂಟ್ವಾಳ: ಕೆದಿಲ ಗ್ರಾಮದ ಪೇರಮೊಗರುವಿನಿಂದ ಮುರದ ವರೆಗೆ ತೆರಳುವ ರಸ್ತೆಯಲ್ಲಿರುವ ಪೂರ್ಲಡ್ಕ ಕಿರು ಸೇತುವೆಯಲ್ಲಿ ಘನ ವಾಹನಗಳು ಸಂಚರಿಸಲು ಪರದಾಡುವ ವಿಷಯದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.

ಈ ಸಂದರ್ಭ ದೊಡ್ಡ ಲಾರಿಯೊಂದು ರಸ್ತೆಯ ಉದ್ದಗಲವನ್ನು ಅರಿಯದೆ ಅಲ್ಲಿ ಬಂದು ಅತ್ತ ಹೋಗಲು ಆಗದೆ. ಇದ್ದ ಹಿಂದೆ ಬರಲೂ ಆಗದೆ ಚಡಪಡಿಸಿ ಬಳಿಕ ಕ್ರೇನ್ ಸಹಾಯದಿಂದ ಪಕ್ಕಕ್ಕೆ ಸರಿಸಿದ ವಿಚಾರ ಪ್ರಸ್ತಾಪವಾಗಿತ್ತು.

ಈಗ ಮತ್ತೆ ಅಂಥದ್ದೇ ಸ್ಥಿತಿ. ಮರದ ದಿಮ್ಮಿ ಸಾಗಾಟದ ಲಾರಿಯೊಂದು ಸೇತುವೆ ದಾಟಲಾಗದೆ ಚಾಲಕನ ನಿಯಂತ್ರಣ ತಪ್ಪಿ ಚಾಲಕ ಸಮೇತ ಆಕಾಶಕ್ಕೆ ಮುಖ ಮಾಡಿ ನಿಂತಿತು. ಬಳಿಕ ಸ್ಥಳೀಯರ ನೆರವಿನಿಂದ ತೆರವುಗೊಳಿಸಲಾಯಿತು.

Edited By :
PublicNext

PublicNext

07/06/2022 07:29 pm

Cinque Terre

26.21 K

Cinque Terre

1

ಸಂಬಂಧಿತ ಸುದ್ದಿ