ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಪೆಟ್ರೋಲ್ ಬಂಕ್ ಬಳಿ ಆಟೋಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುಗಳನ್ನು ಬೈಕ್ ಸವಾರ ಪಡುಪಣಂಬೂರು ನಿವಾಸಿ ಶುಶ್ರುತ್(20) ಆಟೋ ಚಾಲಕ ವಲೇರಿಯನ್,
ಎಂದು ಗುರುತಿಸಲಾಗಿದೆ.
ಮುಲ್ಕಿ ಕಡೆಯಿಂದ ಕಾರ್ನಾಡು ಬೈಪಾಸ್ ಬಳಿಯ ಚಾಲಕ ವಲೇರಿಯನ್ ಮನೆಗೆ ಹೊರಟಿದ್ದ ಆಟೋಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ ಹೆದ್ದಾರಿ ಡಿವೈಡರ್ ಮೇಲೆ ಬಿದ್ದಿದ್ದು ಆಟೋ ಹೆದ್ದಾರಿ ಬದಿಯ ಚರಂಡಿಗೆ ಇಳಿದಿದ್ದು ರಿಕ್ಷಾ ಚಾಲಕನನ್ನು ಕೂಡಲೇ ಸ್ಥಳೀಯರಾದ ಕಿಶೋರ್ ಟೈಲರ್ ಮತ್ತಿತರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ರಭಸಕ್ಕೆ ಬೈಕ್ ಹಾಗೂ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
01/06/2022 11:10 pm