ಬಂಟ್ವಾಳ: ತೋಟದಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ತೋಟದ ಮಧ್ಯದಲ್ಲಿರುವ ಕೆರೆಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ನಡೆದಿದೆ. ಗ್ರಾಮದ ಹಂಝ ಎಂಬವರ ಪುತ್ರಿ 4ರ ಹರೆಯದ ಸರಪುನ್ನಿಸಾ ಮೃತಪಟ್ಟ ಬಾಲಕಿ.
ಕೊಳ್ನಾಡು ಗ್ರಾಮ ಬಾರೆಬೆಟ್ಟು ನಿವಾಸಿ ಹಂಝ ಅವರ ಮಕ್ಕಳಾದ ರಶೀದ್, ಬದ್ರುದ್ದೀನ್ ಅವರ ಜತೆ ಸರಪುನ್ನಿಸಾ ಅವರು ಅಬ್ಬಾಸ್ ಬಾಕಿಮಾರು ಅವರ ತೋಟಕ್ಕೆ ಆಟವಾಡಲು ತೆರಳಿದ್ದರು. ಆಡುತ್ತಿರುವಾಗ ಮೂವರ ಪೈಕಿ ಸರಪುನ್ನಿಸಾ ತೋಟದ ಮಧ್ಯದಲ್ಲಿದ್ದ ಕೆರೆಗೆ ಕಾಲು ಜಾರಿ ಬಿದ್ದಿದ್ದಾಳೆ. ಈ ಬಗ್ಗೆ ರಶೀದ್, ಬದ್ರುದ್ದೀನ್ ಓಡಿ ಬಂದು ಮನೆಯಲ್ಲಿ ತಿಳಿಸಿದ್ದಾರೆ. ಮನೆಮಂದಿ ಕೆರೆ ಬಳಿಗೆ ಹೋದಾಗ ಮಗಳು ನೀರಿನಲ್ಲಿ ಮುಳುಗಿರುವುದನ್ನು ಕಂಡು ಮಗಳನ್ನು ನೀರಿನಿಂದ ಹೊರಗೆ ತೆಗೆದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದಾಗ ವೈದ್ಯಾಧಿಕಾರಿಯವರು ಪರೀಕ್ಷಿಸಿ ಬಾಲಕಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/01/2021 10:29 pm