ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ತಾಂತ್ರಿಕ ದೋಷದಿಂದ ಸಮುದ್ರಕ್ಕೆ ಬಿದ್ದ ಪ್ಯಾರಾ ಮೋಟಾರ್ : ನೌಕಾನೆಲೆ ಕ್ಯಾಪ್ಟನ್ ಸಾವು

ಕಾರವಾರ: ಪ್ಯಾರಾ ಮೋಟಾರ್ ಹಾರಾಟದ ಸಂದರ್ಭ ತಾಂತ್ರಿಕ ದೋಷದಿಂದಾಗಿ ಸಮುದ್ರಕ್ಕೆ ಬಿದ್ದ ಪರಿಣಾಮ ನೌಕಾನೆಲೆಯ ಕ್ಯಾಪ್ಟನ್ ಒಬ್ಬರು ಮೃತಪಟ್ಟಿರುವ ಘಟನೆ ಕಾರವಾರದ ಕಡಲ ಕಿನಾರೆಯಲ್ಲಿ ಶುಕ್ರವಾರ ನಡೆದಿದೆ.

ಮೂಲತಃ ಆಂಧ್ರಪ್ರದೇಶದ ಸದ್ಯ , ಕಾರವಾರ ನೌಕಾನೆಲೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರು ನಿವಾಸಿ ಮಧುಸೂದನ್ ರೆಡ್ಡಿ (55) ಮೃತಪಟ್ಟವರು.

ಅವರು ಕುಟುಂಬ ಸದಸ್ಯರೊಂದಿಗೆ ಕಾರವಾರ ಕಡಲ ಕಿನಾರೆಗೆ ಆಗಮಿಸಿದ್ದರು. ಈ ವೇಳೆ ಪ್ಯಾರಾ ಮೋಟಾರ್‌ನಲ್ಲಿ ಹಾರುತ್ತಾ ಬಾನೆತ್ತರಕ್ಕೆ ತೆರಳಿದ್ದರು.

ಈ ಸಂದರ್ಭ ಪ್ಯಾರಾ ಮೋಟಾರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಅದರ ಇಂಜಿನ್ ಸ್ಥಗಿತಗೊಂಡು ಸಮುದ್ರಕ್ಕೆ ಬಿದ್ದಿದೆ. ಈ ವೇಳೆ ಮಧುಸೂದನ್ ಮತ್ತು ಪ್ಯಾರಾ ಮೋಟಾರ್ ನಿರ್ವಾಹಕ ವಿದ್ಯಾಧರ ವೈದ್ಯ ಕೂಡ ಸಮುದ್ರ ಪಾಲಾಗಿದ್ದರು.

ಮಧುಸೂದನ್ ಅವರಿಗೆ ಪ್ಯಾರಾ ಮೋಟಾರ್‌ನ ಬೆಲ್ಟ್ ಹಾಕಿದ್ದ ಕಾರಣ ಅದನ್ನು ಬಿಡಿಸಿಕೊಳ್ಳಲಾಗದೇ ತೀವ್ರ ಅಸ್ವಸ್ಥರಾಗಿದ್ದರು. ಅಲ್ಲದೆ, ನಿರ್ವಾಹಕನೂ ಅಸ್ವಸ್ಥರಾಗಿದ್ದರು.

ತಕ್ಷಣ ಇಬ್ಬರನ್ನೂ ಬೋಟ್‌ನ ಮೂಲಕ ದಡಕ್ಕೆ ತಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ಅಸ್ವಸ್ಥರಾಗಿದ್ದ ಮಧುಸೂದನ್ ಮೃತಪಟ್ಟರು. ವಿದ್ಯಾಧರ ವೈದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

02/10/2020 10:42 pm

Cinque Terre

16.06 K

Cinque Terre

3

ಸಂಬಂಧಿತ ಸುದ್ದಿ