ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜಮಾಡಿ: ಕೊಕ್ರಾಣಿ ಶಾಂಭವಿ ನದಿಯಲ್ಲಿ ಮೀನಿನ ಬಲೆಗೆ ಸಿಲುಕಿ ವ್ಯಕ್ತಿ ಸಾವು

ಮುಲ್ಕಿ: ಮುಲ್ಕಿ ಸಮೀಪದ ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯ ಕೊಕ್ರಾಣಿ ಶಾಂಭವಿ ನದಿಯಲ್ಲಿ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮೀನಿಗೆ ಹಾಕಿದ ಬಲೆ ತೆಗೆಯಲು ಹೋಗಿ ಆ ಬಲೆಯಲ್ಲಿಯೇ ಸಿಲುಕಿ ದಾರುಣವಾಗಿ ಮೃತ ಪಟ್ಟಿದ್ದಾರೆ.

ಮೃತರನ್ನು ಮುಲ್ಕಿ ಬಳಿಯ ಕಕ್ವ ನಿವಾಸಿ ವಿಜಯ್ ಫುರ್ಟಾಡೋ(ಬೋನ) (47) ಎಂದು ಗುರುತಿಸಲಾಗಿದೆ.

ಅವರು ಶುಕ್ರವಾರ ಶಾಂಭವಿ ನದಿ ತೀರದ ನೆಹರು ಸೇತುವೆ ಬಳಿ ಮೀನು ಹಿಡಿಯಲು ಬಲೆ ಹಾಕಿದ್ದು, ರಾತ್ರಿ 10ರ ಸುಮಾರಿಗೆ ಪರಿಶೀಲಿಸಲು ತೆರಳಿದಾಗ ಬಲೆಯೊಳಗೆ ಸಿಲುಕಿಕೊಂಡು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ.

ನದಿ ತೀರಕ್ಕೆ ತೆರಳಿದ ವಿಜಯ್ ಮನೆ ಕಡೆ ಬಾರದ್ದನ್ನು ಕಂಡು ತಾಯಿ ಆತಂಕಗೊಂಡು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ ಸ್ಥಳೀಯರು ಕಾರ್ನಾಡು ಆಪತ್ಪಾಂಧವ ಆಸೀಫ್ ಅವರ ನೆರವಿನಿಂದ ರಾತ್ರೋರಾತ್ರಿ ಶವವನ್ನು ಮೇಲೆತ್ತಿದ್ದಾರೆ.

ಮೃತ ವಿಜಯ್ ಅವರು ದುಬೈನ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದು ನೆಲೆಸಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದರು.

ಮುಲ್ಕಿಯ ಮೆಡಲಿನ್, ವಿಜಯ ಕಾಲೇಜು ಹಳೆ ವಿದ್ಯಾರ್ಥಿಯಾಗಿದ್ದ ಅವರು ಕ್ರಿಕೆಟ್, ವಾಲಿಬಾಲ್ ನಲ್ಲಿ ಪ್ರತಿಭಾವಂತರಾಗಿದ್ದರು. ವಿಜಯ್ ಅವರು ತಾಯಿ, ಪತ್ನಿ, ಇಬ್ಬರು ಸಹೋದರರು, ಸಹೋದರಿಯನ್ನು ಅಗಲಿದ್ದು, ಮನೆಯಲ್ಲಿ ಶೋಕ ಮಡುಗಟ್ಟಿದೆ.

ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/12/2020 10:16 am

Cinque Terre

12.87 K

Cinque Terre

0

ಸಂಬಂಧಿತ ಸುದ್ದಿ