ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಎಂಎಫ್ ಡೇರಿಯಲ್ಲಿ ಕೆಮಿಕಲ್ ಸ್ಫೋಟ: ಬಿಸಿನೀರು ಬಿದ್ದು ಕಾರ್ಮಿಕನಿಗೆ ಗಾಯ

ಮಂಗಳೂರು: ಕುಲಶೇಖರದಲ್ಲಿರುವ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಡೈರಿಯಲ್ಲಿ ಕೆಎಂಎಫ್ ಡೈರಿಯಲ್ಲಿ ಕೆಮಿಕಲ್ ಸ್ಫೋಟಗೊಂಡ ಘಟನೆ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭ ಬಿಸಿನೀರು ಮೈಗೆ ತಗುಲಿ ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ.

ಸುಳ್ಯ ಮೂಲದ ಸತೀಶ್(27) ಎಂಬವರು ಮಧ್ಯಾಹ್ನದ ವೇಳೆಗೆ ಕಾಸ್ಟಿಕ್ ಸೋಡಾವನ್ನು ನೀರಿಗೆ ಸೇರಿಸಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಬಿಸಿನೀರು ಮೈಮೇಲೆ ಬಿದ್ದಿದೆ. ಪರಿಣಾಮವಾಗಿ ಅವರ ದೇಹದ ಶೇ.50ರಷ್ಟು ಭಾಗ ಸುಟ್ಟು ಹೋಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸವನ್ನು ಬೆಂಗಳೂರಿನ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದ್ದು, ಆ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಕಾರ್ಮಿಕ ಕಳೆದ ಕೆಲವು ವರ್ಷಗಳಿಂದ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಸೋಡಾ ಮಾದರಿಯ ವಸ್ತುವನ್ನು ಬೆರೆಸಿ ಸ್ವಚ್ಛಗೊಳಿಸುವಾಗ ಬಿಸಿನೀರು ಮೈಮೇಲೆ ಬಿದ್ದು ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತೀಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

16/12/2020 09:42 am

Cinque Terre

8.81 K

Cinque Terre

0

ಸಂಬಂಧಿತ ಸುದ್ದಿ