ಬಂಟ್ವಾಳ: ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾ.ಹೆ. 75ರಲ್ಲಿ ಗುರುವಾರ ಇಳಿಸಂಜೆ ಬೈಕ್ ಸ್ಕಿಡ್ ಆಗಿ ನಡೆದ ಅಪಘಾತದಲ್ಲಿ ವಿಟ್ಲದ ಜನಪ್ರಿಯ ಬಾಣಸಿಗ ಕಾಂತಡ್ಕ ಶಂಕರನಾರಾಯಣ ಭಟ್ (58) ಸಾವನ್ನಪ್ಪಿದ್ದಾರೆ.
ಮಂಗಳೂರು ಕಡೆಯಿಂದ ಬೈಕಿನಲ್ಲಿ ವಿಟ್ಲ ಕಡೆಗೆ ಬರುತ್ತಿದ್ದ ಅವರ ಬೈಕ್, ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ಪಲ್ಟಿಯಾಗಿ ಅಪಘಾತ ಘಟಿಸಿದ್ದಾಗಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಅಸು ನೀಗಿದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ವಿಟ್ಲ ಪರಿಸರದ ಜನಾನುರಾಗಿ ಬಾಣಸಿಗರಾಗಿದ್ದ ಅವರು, ಹಲವಾರು ದೇವಸ್ಥಾನಗಳ ದೊಡ್ಡ ಪ್ರಮಾಣದ ಅಡುಗೆಯನ್ನು ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ವಿಟ್ಲ ಸಮೀಪ ನೆತ್ತರಕೆರೆ ಎಂಬಲ್ಲಿನ ಪಾಂಚಜನ್ಯ ಲೇಔಟ್ ನಲ್ಲಿ ವಾಸವಾಗಿದ್ದರು.
Kshetra Samachara
11/12/2020 08:33 pm