ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಬೈಕ್ ಮಗುಚಿ ಬಿದ್ದು ಕಡಬ ನಿವಾಸಿ ಜೋಸ್ ಅವರ ಪತ್ನಿ ಕ್ಲಾರಮ್ಮ (60) ಎಂಬವರು ಮೃತ ಪಟ್ಟಿದ್ದಾರೆ.
ಬೈಕ್ ಸ್ಕಿಡ್ ಆಗಿ ಬಿದ್ದು ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಮೃತರು ಪತಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Kshetra Samachara
01/12/2020 05:09 pm