ಬೆಳ್ತಂಗಡಿ : ಆಟವಾಡುತ್ತಿದ್ದ ಮಗುವೊಂದು ಅಕಸ್ಮಾತ್ತಾಗಿ ಕಾಲು ಜಾರಿ ನೀರು ತುಂಬಿದ್ದ ಬಕೆಟ್ ಒಳಗೆ ಬಿದ್ದು ದಾರುಣವಾಗಿ ಮೃತ ಪಟ್ಟ ಘಟನೆ ಅರಸಿನಮಕ್ಕಿ ಸಮೀಪದ ಕಲ್ಲಕೋಟೆ ಎಂಬಲ್ಲಿ ನಡೆದಿದೆ.
ಜಗದೀಶ್ ಆಚಾಯ೯ ಮತ್ತು ವಿದ್ಯಾ ದಂಪತಿಗಳ 8 ತಿಂಗಳ ಮಗು ತಾಯಿ ಬಟ್ಟೆ ಒಗೆಯುತ್ತಿದ್ದ ಸಂದಭ೯ ಲೋಟ ಹಿಡಿದುಕೊಂಡು ಟಾಯ್ಲೆಟ್ ಗೆ ಹೋಗಿ ಬಕೆಟ್ ನಲ್ಲಿ ನೀರಿಗೆ ಲೋಟವನ್ನು ಹಾಕಿ ತೆಗೆಯಲು ಯತ್ನಿಸಿದಾಗ ಕಾಲು ಜಾರಿ ಬಕೆಟ್ ಒಳಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಸ್ವಲ್ಪ ಹೊತ್ತಿನಲ್ಲಿ ಮಗು ಕಾಣದಿದ್ದಾಗ ಮಗುವನ್ನು ಹುಡುಕುತ್ತಾ ತಾಯಿ ಹೋಗಿ ಎಲ್ಲಿಯೋ ಕಾಣದಿದ್ದಾಗ ಟಾಯ್ಲೆಟ್ ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಜಗದೀಶ್ ಆಚಾರ್ಯ ಅರಸಿನಮಕ್ಕಿ-ಕೊಕ್ಕಡ ನಡುವೆ ಜೀಪು ಸರ್ವಿಸ್ ಮಾಡುತ್ತಿದ್ದು, ಘಟನೆ ನಡೆದಾಗ ಅವರು ಶಿವಮೊಗ್ಗ ಬಳಿಯ ಜೋಗಕ್ಕೆ ಬಾಡಿಗೆಗೆ ತೆರಳಿದ್ದರು. ಎಂದು ತಿಳಿದುಬಂದಿದೆ.
Kshetra Samachara
19/10/2020 03:03 pm