ಮುಂಬೈ: ಮಾಡೆಲ್ ಹರ್ನಾಜ್ ಸಂಧು ಮಿಸ್ ಯುನಿವರ್ಸ್ ಕಿರೀಟ್ ಧರಿಸುವಾಗ ತೊಟ್ಟಿದ್ದ ಆ ಸುಂದರ ಗೌನ್ ಡಿಸೈನ್ ಮಾಡಿದ್ದು ಯಾರು ಗೊತ್ತೇ.? ಗೊತ್ತು ಬಿಡಿಸಿ ಡಿಸೈನರೇ ಮಾಡಿರುತ್ತಾರೆ. ಅದರಲ್ಲೂ ಲೇಡಿ ಡಿಸೈನರೇ ಈ ಸುಂದರ ಡಿಸೈನ್ ಮಾಡಿಕೊಟ್ಟಿರೋದು ಅಂತ ನೀವ್ ಗೆಸ್ ಮಾಡಿರುತ್ತೀರಾ. ಆದರೆ ಇಲ್ಲಿ ವಿಷಯ ಬ್ಯಾರೇನೆ ಐತಿ. ಬನ್ನಿ, ಹೇಳ್ತೀವಿ.
ಹರ್ನಾಜ್ ಸಂಧು ಮಿಸ್ ಯುನಿವರ್ಸ್ ಕಿರೀಟ ಸ್ವೀಕರಿಸುವಾಗ ಚೆಂದದ ಗೌನ್ ತೊಟ್ಟಿದ್ದರು. ಇದನ್ನ ಡಿಸೈನ್ ಮಾಡಿರೋದು ಒಬ್ಬ ಟ್ರಾನ್ಸ್‌ವುಮನ್.ಹೌದು. ಇವರ ಹೆಸರು ಸೈಶಾ ಶಿಂಧೆ. ಈ ಸೈಶಾ ಸಿಂಧೆ ಸೆಲೆಬ್ರಿಟಿ ಡಿಸೈನರ್ ಆಗಿದ್ದಾರೆ.
ಬಾಲಿವುಡ್ ನ ಕರೀನಾ ಕಪೂರ್,ಅನುಷ್ಕಾ ಶರ್ಮಾ,ದೀಪಿಕಾ ಪಡಕೋಣೆ, ಅನುಷ್ಕಾ ಶರ್ಮಾ, ಕತ್ರೀನಾ ಕೈಫ್,ಮಾಧುರಿ ದೀಕ್ಷಿತ್ ಹೀಗೆ ಇವರಿಗೆಲ್ಲ ಸೈಶಾ ಶಿಂಧೆನೇ ಡಿಸೈನರ್.
ಈ ಸೈಶಾನೆ ಮಿಸ್ ಯುನಿವರ್ಸ್ ಹರ್ನಾಜ್ ತೊಟ್ಟ ಗೌನ್ ಡಿಸೈನ್ ಮಾಡಿದ್ದರು. ಈಗ ಈ ವಿಷಯ ಹೊರ ಬಿದ್ದಿದೆ. ಸುದ್ದಿನೂ ಆಗಿದೆ.
PublicNext
14/12/2021 02:56 pm