ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಡಿವೋರ್ಸ್ ಕುರಿತು ಸುದ್ದಿ ಎಲ್ಲಾ ಕಡೆಯು ಹಬ್ಬಿತ್ತು. ಈಗ ಆ ಡಿವೋರ್ಸ್ ವದಂತಿಗೆ ಐಶ್ವರ್ಯಾ ರೈ ದಂಪತಿ ಬ್ರೇಕ್ ಹಾಕಿದ್ದಾರೆ. ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕುಟುಂಬದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಪತ್ನಿ ಐಶ್ವರ್ಯಾ ಮತ್ತು ಅತ್ತೆ ಜೊತೆ ನಿಂತು ಅಭಿಷೇಕ್ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಫ್ಯಾಮಿಲಿ ಜೊತೆ ನಿಲ್ಲದೇ ಮಗಳೊಂದಿಗೆ ಪ್ರತ್ಯೇಕವಾಗಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ರು. ಅಲ್ಲಿಂದ ಈ ಡಿವೋರ್ಸ್ ವದಂತಿಗಳು ಹರಿದಾಡಿದ್ದು ಇದೀಗ ಈ ಗಾಸಿಪ್ ಗೆ ಐಶ್ವರ್ಯಾ ರೈ ಬ್ರೇಕ್ ಹಾಕಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
PublicNext
09/12/2024 06:21 pm