ನವದೆಹಲಿ: ಡಿಸೈನರ್ ಬ್ರ್ಯಾಂಡ್‌ಗಳು ಅವುಗಳ ಶೈಲಿಯಿಂದ ಫುಲ್ ಫೇಮಸ್ ಆಗುತ್ತವೆ. ಅಷ್ಟೇ ಅಲ್ಲದೆ ಅದರ ಬೆಲೆಯೂ ಭಾರೀ ದುಬಾರಿಯಾಗಿರುತ್ತದೆ.
ಅಂತಹ ಬ್ರಾಂಡ್‌ಗಳಲ್ಲಿ ಗುಸ್ಸಿ ಕೂಡ ಒಂದಾಗಿದೆ. ಇದು ಇಟಾಲಿಯನ್ ಫ್ಯಾಷನ್ ಹಾಗೂ ಚರ್ಮದ ವಸ್ತುಗಳಿಂದ ಫೇಮಸ್ ಆಗಿದೆ. ಈ ಕಂಪನಿ ತಯಾರಿಸುವ ಬೆಲ್ಟ್, ಜಾಕೆಟ್, ಬ್ಯಾಗ್ ಹಾಗೂ ಶೂಗಳು ಯಾವಾಗಲೂ ನವೀನ ಶೈಲಿ ಮತ್ತು ವಿನ್ಯಾಸದಿಂದಾಗಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುತ್ತವೆ. ಸದ್ಯ ಈ ಕಂಪನಿಯು ಪುರುಷರಿಗಾಗಿ ಹುಲ್ಲಿನ ಕಲೆ ಇರುವ ಒಂದು ಜೋಡಿ ಜೀನ್ಸ್ ಅನ್ನು ಮಾರುಕಟ್ಟೆಗೆ ಬಿಟ್ಟಿದ್ದು, ಅದರ ಬೆಲೆಯನ್ನು 88,290 ರೂ.ಗೆ ನಿಗದಿಪಡಿಸಿದೆ.
ಹುಲ್ಲಿನ ಕಲೆಯುಳ್ಳ ಜೀನ್ಸ್ ಪ್ಯಾಂಟ್ ವಿನ್ಯಾಸ ಹಾಗೂ ಅದರ ಬೆಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
22/09/2020 05:16 pm