ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಸ್ಟ್ ಕಾಸ್ಟ್ಯೂಮ್‌ ವಿಭಾಗದಲ್ಲಿ ಧಾರವಾಡದ ಕುವರಿಗೆ ಪ್ರಥಮ ಸ್ಥಾನ

ಧಾರವಾಡ: ಈಜಿಪ್ಟ್ ದೇಶದ ಲಕ್ಸರ್ ಪಟ್ಟಣದಲ್ಲಿ ನಡೆದ ಬ್ಯೂಟಿ ಕಾಂಫಿಟೇಶನ್‌ಲ್ಲಿ ಇಡೀ ಭಾರತವನ್ನು ಪ್ರತಿನಿಧಿಸಿದ್ದ ಧಾರವಾಡದ ಖುಷಿ ಟಿಕಾರೆ ಬೆಸ್ಟ್ ಕಾಸ್ಟ್ಯೂಮ್‌ ವಿಭಾಗದಲ್ಲಿ ನವಿಲಿನ ಚಿತ್ರಣ ಹೋಲುವ ಆಕರ್ಷಕ ವಸ್ತ್ರ ವಿನ್ಯಾಸದ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದಿದ್ದಲ್ಲದೇ, ಪ್ರಥಮ ಸ್ಥಾನ ಪಡೆದು ಭಾರತಕ್ಕೆ ಕೀರ್ತಿ ತಂದಿದ್ದಾಳೆ.

ಡಿಸೆಂಬರ್ 11 ರಿಂದ 21 ರವರೆಗೆ ನಡೆದ ಈ ಬ್ಯೂಟಿ ಕಾಂಫಿಟೇಶನ್‌ಲ್ಲಿ ಜಗತ್ತಿನಾದ್ಯಂತ 35 ಸುಂದರಿಯರು ಪಾಲ್ಗೊಂಡಿದ್ದರು. ಲಕ್ಸರ್ ಪಟ್ಟಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಹಲವಾರು ಟಾಸ್ಕ್‌ಗಳನ್ನು ಕೊಡಲಾಗಿತ್ತು. ಇಲ್ಲಿ ಖುಷಿ ಟಿಕಾರೆ ಅವರು ನಮ್ಮ ಭಾರತದ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ.

ಮಿಸ್ ಎಕೋಟಿನ್ ವಿಭಾಗದಲ್ಲೂ ಪಾಲ್ಗೊಂಡಿದ್ದ ಖುಷಿ 10ನೇ ಸ್ಥಾನ ಪಡೆದು ಟಾಪ್ 10ರೊಳಗೆ ಸೇರ್ಪಡೆಯಾಗಿದ್ದಾರೆ. 35 ಸ್ಪರ್ಧಾಳುಗಳ ಪೈಕಿ ಬೆಸ್ಟ್ ಕಾಸ್ಟ್ಯೂಮ್ ಅವಾರ್ಡ್‌ ಸಿಕ್ಕಿದ್ದು ಭಾರತಕ್ಕೆ ಮಾತ್ರ ಎಂಬುದು ವಿಶೇಷ.

ಈಜಿಪ್ಟ್ ದೇಶದ ಲಕ್ಸರ್ ಸಿಟಿಯಲ್ಲಿರುವ ಜಾಲಿ ವ್ಯಾಲಿ ರೆಸಾರ್ಟ್, ಕಿಂಗ್ಸ್ ಐಲ್ಯಾಂಡ್‌ನಲ್ಲಿ ಟಾಸ್ಕ್‌ಗಳು ನಡೆದವು. ಕೊನೆಯಲ್ಲಿ ಫೈನಲ್ ಸ್ಟೇಜ್ ಪ್ರೋಗ್ರಾಂ ಕೈರೋ ಪಟ್ಟಣದ ತ್ರಿಮಲ್ಪ ಲಕ್ಸರಿ ಹೋಟೆಲ್‌ನಲ್ಲಿ ನಡೆದಿದೆ‌‌.

Edited By : Manjunath H D
PublicNext

PublicNext

23/12/2021 05:39 pm

Cinque Terre

95.18 K

Cinque Terre

2