ಬೆಂಗಳೂರು: ಬೃಹತ್ ಗೃಹ ಬಳಕೆಯ ರಿಟೇಲ್ ಔಟ್‌ಲೆಟ್ ಐಕಿಯಾ ಇದೀಗ ಬೆಂಗಳೂರಿನ ತುಮಕೂರು ರಸ್ತೆ ನಾಗಸಂದ್ರ ಮೆಟ್ರೋ ನಿಲ್ದಾಣ ಬಳಿ ಪ್ರಾರಂಭವಾಗಿದೆ. ಸ್ವೀಡನ್ ದೇಶದ ಬೃಹತ್ ಗೃಹ ಉಪಕರಣಗಳ ಚಿಲ್ಲರೆ ವ್ಯಾಪಾರ ಮಳಿಗೆ ಐಕಿಯಾ ಬಾಂಬೆ-ಹೈದರಾಬಾದ್ ನಂತ್ರ ದೇಶದ 3ನೇ IKEA ಔಟ್ ಲೆಟ್ ನ್ನು ಬೆಂಗಳೂರಿನಲ್ಲಿ ಜೂ. 22ರಂದು C.M. ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಕೈಗೆಟುಕೋ ಬೆಲೆಯ ಎಲ್ಲಾ ಗೃಹಬಳಕೆ ಉತ್ಪನ್ನ ಒಂದೇ ಕಡೆ ಸಿಗೋದ್ರಿಂದ ಬೆಂಗಳೂರಿಗರ ಚಿತ್ತ ಐಕಿಯಾದತ್ತ ಹೊರಳಿದೆ.
12 ಎಕರೆ ಪ್ರದೇಶದಲ್ಲಿ 7 ಸಾವಿರಕ್ಕೂ ಹೆಚ್ಚು ಗೃಹೋಪಯೋಗಿ ಉತ್ಪನ್ನ ಮಾರಾಟ ಮಳಿಗೆಯಲ್ಲಿ ಎಲ್ಲಾ ವಸ್ತುಗಳು ಒಂದೇ ಕಡೆ ಸಿಗುತ್ತವೆ. ಕೇವಲ ಹತ್ತು ದಿನಗಳ ಅಂತರದಲ್ಲಿ ಲಕ್ಷಾಂತರ ಜನ ಐಕಿಯಾ ವಸ್ತು ಖರೀದಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತ ವಿಶ್ವ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ದೇಶೀಯ ಉತ್ಪನ್ನ ವಿದೇಶಗಳಿಗೆ, ವಿದೇಶಿ ಉತ್ಪನ್ನ ನಮ್ಮ ದೇಶಕ್ಕೆ ಅದರಲ್ಲೂ ಬೆಂಗಳೂರಿಗೆ ಬಂದು ಗ್ರಾಹಕರ ಕೈ ಸೇರುತ್ತಿವೆ. ಗೃಹ ಬಳಕೆಯ 7 ಸಾವಿರಕ್ಕೂ ಅಧಿಕ ಉತ್ಪನ್ನ ಒಂದೇ ಸೂರಿನಡಿ ಸಿಗುತ್ತಿರುವುದು ಖುಷಿಯ ವಿಷಯ. ಆದರೆ, ಐಕಿಯಾ ಸುತ್ತಮುತ್ತ ಟ್ರಾಫಿಕ್ ಜಾಮ್ ಕಿರಿಕಿರಿ ದೊಡ್ಡ ತಲೆನೋವಾಗಿದೆ.
PublicNext
03/07/2022 07:50 pm