ವಾಷಿಂಗ್ಟನ್- ಕೊರೊನಾ ದಿನಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು. ಇಲ್ಲದಿದ್ರೆ ದಂಡ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕಾಗಿ ಮಾರ್ಕೆಟ್ಟಲ್ಲಿ ತರಹೇವಾರಿ ವಿನ್ಯಾಸದ ಮಾಸ್ಕ್ ಗಳು ಎಂಟ್ರಿ ಕೊಟ್ಟಿವೆ.
ಅದರಲ್ಲಿ ಎಲ್ಲಕ್ಕಿಂತ ವಿಶೇಷ ಅಂದ್ರೆ ಈಗ ನೇರವಾಗಿ ಮೂಗಿನ ಹೊಳ್ಳೆಗಳಲ್ಲಿ ಧರಿಸಬಹುದಾದ ಮಾಸ್ಕ್ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಎಲ್ಲರಲ್ಲೂ ಆಸಕ್ತಿ ಮೂಡಿಸಿದೆ.
ಹಾಗಾದ್ರೆ ಸೀನು ಬಂದಾಗ, ಜೋರಾಗಿ ನಕ್ಕಾಗ ಈ ಮಾಸ್ಕ್ ಕೆಳಗೆ ಬೀಳಲ್ವಾ? ಎನ್ನುವ ಪ್ರಶ್ನೆಗಳು ಎದ್ದಿವೆ. ಇದಕ್ಕೆಲ್ಲ ಇನ್ನೂ ಉತ್ತರ ಸಿಕ್ಕಿಲ್ಲ.
ಆದ್ರೆ ದಂಡ ಹಾಕಬೇಕಾದ ಪೊಲೀಸರು ಮಾತ್ರ ಇದರಿಂದ ವಿಚಲಿತರಾಗದೇ ಇರಲಾರರು. ಒಂದು ವೇಳೆ ಇದು ಜಾರಿಯಾದರೆ ಒಬ್ಬೊಬ್ಬರನ್ನೇ ನಿಲ್ಲಿಸಿ ಅವರ ಮೂಗನ್ನೂ ಇಣುಕಿ ನೋಡಬೇಕಾಗುತ್ತೆ ಅಷ್ಟೇ.
PublicNext
28/10/2020 08:01 pm