ಪಾಟ್ನಾ: ಶಿಕ್ಷಕರ ನೇಮಕಾತಿ ವಿಳಂಬ ಪ್ರಶ್ನಿಸಿ ಕಳೆದ ತಿಂಗಳು ನಡೆದ ಪ್ರತಿಭಟನೆಯಲ್ಲಿ ಶಿಕ್ಷಕ ಉದ್ಯೋಗ ಆಕಾಂಕ್ಷಿಯೊಬ್ಬರಿಗೆ ಥಳಿಸಿದ ಆರೋಪದ ಮೇಲೆ ಪಾಟ್ನಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಕಾನೂನು ಮತ್ತು ಸುವ್ಯವಸ್ಥೆ) ಕೆಕೆ ಸಿಂಗ್ ಅವರನ್ನು ಬುಧವಾರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಅವರನ್ನು ಬಿಹಾರದ ಸಾಮಾನ್ಯ ಆಡಳಿತ ಇಲಾಖೆಗೆ ವರ್ಗಾಯಿಸಲಾಗಿದೆ. ರಾಷ್ಟ್ರಧ್ವಜ ಹಿಡಿದಿದ್ದ ಶಿಕ್ಷಕ ಉದ್ಯೋಗ ಆಕಾಂಕ್ಷಿಗೆ ಕೆಕೆ ಸಿಂಗ್ ಅವರು ಆತ ಥಳಿಸಿದ ವಿಡಿಯೋ ವೈರಲ್ ಆಗಿತ್ತು.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕಳೆದ ತಿಂಗಳು ಪಾಟ್ನಾದ ದಾಕ್ ಬಂಗ್ಲಾ ಚೌರಾನ ಎಂಬಲ್ಲಿ ಈ ಪ್ರತಿಭಟನೆ ನಡೆದಿದೆ. ನೂರಾರು ಶಿಕ್ಷಕ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಈ ವೇಳೆ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗುತ್ತಿದ್ದ ಯುವಕನ ಮೇಲೆ ಕೆಕೆ ಸಿಂಗ್ ಹಿಗ್ಗಾಮುಗ್ಗ ಲಾಠಿ ಪ್ರಹಾರ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಹೊಡೆತ ಬೀಳುವಾಗ ನೆಲದಲ್ಲಿ ಬಿದ್ದು ಕೈ ಅಡ್ಡ ಹಿಡಿಯುತ್ತಿರುವ ಯುವಕ, ಆತನ ಕೈಯಲ್ಲಿ ತಿರಂಗವೂ ಇದೆ. ಆಮೇಲೆ ಅಲ್ಲಿದ್ದ ಪೊಲೀಸ್ ಆತ ಕೈಯಿಂದ ರಾಷ್ಟ್ರಧ್ವಜವನ್ನು ಎಳೆದು ತೆಗೆಯುತ್ತಿರುವುದು ವಿಡಿಯೀದಲ್ಲಿ ಕಾಣಬಹುದಾಗಿದೆ.
PublicNext
15/09/2022 03:44 pm