ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಗಾಣಿಗ-ಲಿಂಗಾಯತ ಗಾಣಿಗ ಎರಡೂ ಒಂದೇ ಜಾತಿ-ಸುಪ್ರೀಂ ಕೋರ್ಟ್

ನವದೆಹಲಿ: ಹಿಂದೂ ಗಾಣಿಗ ಮತ್ತು ಲಿಂಗಾಯತ ಗಾಣಿಗ ಇವರೆಡು ಬೇರೆ ಬೇರೆ ಜಾತಿಗಳಲ್ಲ. ಎರಡೂ ಒಂದೇನೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸಂಗಪ್ಪ ಹಸಪ್ಪ ಮಾಳೆಣ್ಣವರ್ ಅವರಿಗೆ ಒಬಿಸಿ ಮೀಸಲಾತಿಗಾಗಿಯೇ "ಗಾಣಿಗ" ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು.ಆದರೆ, ಏಕ ಪೀಠದ ತೀರ್ಪನ್ನ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ದ ಎಂ.ವಿ.ಚಂದ್ರಕಾಂತ್ ಮನವಿ ಸಲ್ಲಿಸಿದ್ದರು.

ಆದರೆ, ಈಗ ಇದೇ ಮನವಿಯನ್ನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ.ಮಹೇಶ್ವರಿ ಅವರ ಪೀಠ ವಜಾಗೊಳಿಸಿದೆ.

Edited By :
PublicNext

PublicNext

31/07/2022 10:37 am

Cinque Terre

38.88 K

Cinque Terre

0

ಸಂಬಂಧಿತ ಸುದ್ದಿ