ಚೆನ್ನೈ: ವಿವಾಹ ವಿಚ್ಛೇದನ ಕೇಸ್ ವೊಂದರಲ್ಲಿ ವಿಚ್ಛೇದನ ಕೊಡೋ ಸಮಯದಲ್ಲಿ ಮದ್ರಾಸ್ ಹೈಕೋರ್ಟ್ ಈಗ ಒಂದು ವಿಚಾರವನ್ನ ಗಮನಿಸಿದ್ದು, ಪತಿಯಿಂದ ದೂರ ಇರೋ ಮಹಿಳೆ ಗಂಡ ಕಟ್ಟಿದ ತಾಳಿ ತೆಗೆಯುವದರಿಂದ ಪತಿಯ ಮಾನಸಿಕ ಹಿಂಸೆಗೆ ಗುರಿ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.
ವಿಚ್ಛೇದಿತ ಪತ್ನಿ ತಾಳಿ ತೆಗೆದು ಹಾಕೋದ್ರಿಂದ ವಿಚ್ಛೇದಿತ ಪತಿಯ ಮಾನಸಿಕ ಸ್ಥಿತಿ ಏರು-ಪೇರಾಗುತ್ತದೆ. ಹಾಗೇನೆ ಪತ್ನಿ ತಾಳಿ ತೆಗೆಯೋದು ಒಂದೇ ಕಾರಣಕ್ಕೆ, ಅದು ಪತಿ ಮರಣದ ಬಳಿಕವೇ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಪತಿ,ಪತ್ನಿಗೆ ಕಟ್ಟುವ ತಾಳಿ ಅನ್ನೋದು ದಾಂಪತ್ಯ ಜೀವನದ ನಿರಂತರತೆಯನ್ನ ಸೂಚಿಸುತ್ತದೆ ಅಂತಲೂ ಮ್ರದಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
PublicNext
15/07/2022 05:21 pm