ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕಿ ಕಿಡ್ನಾಪ್ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದಿದ್ದ ಮೋಕ್ಷಿತಾ ಪೈ ನಿಜವಾದ ಹೆಸರೇನು? - ಕಳ್ಳಿಯ ಅಸಲಿ ಬಣ್ಣ ಇಲ್ಲಿದೆ

ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಇರುವ ಮೋಕ್ಷಿತಾ ಪೈ ಬಗ್ಗೆ ಇಲ್ಲೊಂದು ಶಾಕಿಂಗ್ ಮಾಹಿತಿ ಇಲ್ಲಿದೆ ನೋಡಿ. ಹೌದು, ಮೋಕ್ಷಿತಾ ಪೈ ಕೇವಲ 20 ವರ್ಷ ವಯಸ್ಸಿದ್ದಾಗಲೇ ಮೋಕ್ಷಿತಾ ಪೈ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋಗಿ ಬಂದಿರೋ ಖತರ್ನಾಕ್ ಕಿಲಾಡಿ.

ಮೋಕ್ಷಿತಾ ಪೈ ನಿಜವಾದ ಹೆಸರು ಐಶ್ವರ್ಯ ಪೈ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟದಲ್ಲಿ ಬಂದ ಹುಡುಗಿ ಈಕೆ. ಮೋಕ್ಷಿತಾಗೆ ಸಹೋದರನೊಬ್ಬನಿದ್ದು, ಆತ ವಿಕಲಚೇತನ. ಈಕೆ ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ (ಸಹೋದರ) ಅಂದರೆ ತುಂಬಾ ಇಷ್ಟ ಎನ್ನುವ ಮಾತುಗಳನ್ನು ಹೇಳಿಕೊಂಡಿರುವುದು ಇದೆ.

ಮೋಕ್ಷಿತಾ ಬಿಕಾಂ ಪದವೀಧರೆಯಾಗಿದ್ದಾಗ ರಾರಾಜಿನಗರದ ಪ್ರಕಾಶ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದಳು. ಟ್ಯೂಷನ್‌ಗಾಗಿ ಸಾಕಷ್ಟು ಮಕ್ಕಳು ಈಕೆಯ ಮನೆಗೆ ಬರುತ್ತಿದ್ದರು. ಮೋಕ್ಷಿತಾ ಪೈಗೆ ಒಬ್ಬ ಗೆಳೆಯನಿದ್ದ. ಆತ ಎಂಬಿಎ ಪದವೀಧರನಾಗಿದ್ದನು. ಜೊತೆಗೆ ಆತ ನಿರುದ್ಯೋಗಿ ಕೂಡ ಆಗಿದ್ದು, ಮೈತುಂಬ ಸಾಲ ಮಾಡಿದ್ದ ಈತನ ಹೆಸರು ನಾಗಭೂಷಣ್ (26). ಲೈಫ್‌ನಲ್ಲಿ ಒಂದೇ ಸಲ ಸೆಟಲ್ ಆಗಬೇಕು ಅಂತ ಆಸೆ ತೋರಿಸಿ ಮೋಕ್ಷಿತಾಳ ಜೊತೆ ಸೇರಿ ನಾಗಭೂಷನ್ ದೊಡ್ಡ ಸಂಚು ರೂಪಿಸುತ್ತಾರೆ.

ಇದಕ್ಕಾಗಿ ಇವರಿಬ್ಬರು ಹಿಡಿದ ದಾರಿ ಕಿಡ್ನ್ಯಾಪ್. ಮೋಕ್ಷಿತಾ ಪೈ ಅಲಿಯಾಸ್ ಐಶ್ವರ್ಯ ಪೈಗೆ ಕಿಡ್ನಾಪ್ ಸಂಚು ರೂಪಿಸಿದಾಗ ಕೇವಲ 20 ವರ್ಷ. ಗೆಳೆಯ ನಾಗಭೂಷಣ್ ಹಾಗೂ ಐಶ್ವರ್ಯ ಪೈ ಇಬ್ಬರೂ ಸೇರಿ ಟ್ಯೂಷನ್‌ಗೆ ಬರುತ್ತಿದ್ದ ಬಾಲಕಿಯನ್ನು ಕಿಡ್ನಾಪ್ ಮಾಡಲು ಸಂಚು ರೂಪಿಸುತ್ತಾರೆ. ಅಂತೆಯೇ ತನ್ನ ಬಳಿ ಟ್ಯೂಷನ್‌ಗೆ ಬರುತ್ತಿದ್ದ 14 ವರ್ಷದ ಬಾಲಕಿಯನ್ನು (ಪವಿತ್ರಾ) ಮೋಕ್ಷಿತಾ ಪೈ ಗೆಳೆಯನಿಂದ ಕಿಡ್ನ್ಯಾಪ್ ಮಾಡಿಸುತ್ತಾಳೆ. ಯಾಕೆಂದರೆ ಬಾಲಕಿ ತಂದೆ ಹೋಟೆಲ್ ಉದ್ಯಮಿಯಾಗಿರುತ್ತಾರೆ. ಹೋಟೆಲ್ ಉದ್ಯಮದಲ್ಲಿ ಕೈ ತುಂಬ ಹಣ ಬರುತ್ತೆ. ಈ ಮಗುವನ್ನು ಹಿಡಿದುಕೊಂಡರೆ ಒಳ್ಳೆ ದುಡ್ಡನ್ನು ಮಾಡಬಹುದು ಅನ್ನೋ ಪ್ಲ್ಯಾನ್ ಇವರಿಬ್ಬರದ್ದು.

ಇನ್ನು ಟ್ಯೂಷನ್‌ಗೆ ಬರುವ ಎಲ್ಲಾ ಮಕ್ಕಳಿಗೂ ನಾಗಭೂಷಣ್ ನಿಧಾನಕ್ಕೆ ಪರಿಚಿತರಾಗಿರುತ್ತಾರೆ. ಪ್ಲ್ಯಾನ್‌ನಂತೆ 2014ರಲ್ಲಿ ಕಿಡ್ನಾಪ್ ಸಂಚು ರೂಪಿಸುತ್ತಾರೆ ಪ್ರಿಯಕರ ನಾಗಭೂಷಣ್ ಹಾಗೂ ಐಶ್ವರ್ಯ ಪೈ (ಮೋಕ್ಷಿತಾ ಪೈ). 2014 ಮಾರ್ಚ್ 13ರಂದು ಸಂಜೆ 6ಗಂಟೆ ಸುಮಾರಿಗೆ ಬಾಲಕಿ ಪವಿತ್ರಾ ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ನಾಗಭೂಷಣ್ ಅವಳನ್ನು ಕಾರಿನೊಳಗೆ ಕಿಡ್ನಾಪ್ ಮಾಡುತ್ತಾರೆ. ನಾಗಭೂಷಣ್ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ತಮ್ಮ ಮನೆಯಲ್ಲಿ ಇಡುತ್ತಾರೆ.

ಇತ್ತ ಮಗಳು ಪವಿತ್ರಾ ಮನೆಗೆ ಬರದೇ ಇದ್ದಾಗ ಆಕೆಯ ತಾಯಿ ರತ್ಮಮ್ಮ ಗಾಬರಿಯಾಗಿ ಐಶ್ವರ್ಯ ಪೈ ಅವರ ಮನೆಗೆ ಹೋಗಿ ಕೇಳುತ್ತಾರೆ. ಆಗ ಐಶ್ವರ್ಯ ಪೈ ಪವಿತ್ರಾ ಟ್ಯೂಷನ್ ಮುಗಿಸಿ ಮನೆಗೆ ಹೋದಳು ಅಂತ ಸುಳ್ಳು ಹೇಳುತ್ತಾರೆ. ಆಗ ರತ್ನಮ್ಮ ಗಾಬರಿಯಾಗಿ ಪವಿತ್ರಾಳನ್ನು ಹುಡುಕಾಡಲು ಶುರು ಮಾಡುತ್ತಾರೆ. ಇದೇ ಸಮಯಕ್ಕೆ ಇವರಿಬ್ಬರು ಬಾಲಕಿ ತಂದೆಗೆ ಕರೆ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಡುತ್ತಾರೆ. ಆಗ ಸುರೇಶ್ ಪೊಲೀಸರ ಸಹಾಯ ಪಡೆದು, ಮೊಬೈಲ್ ಫೋನ್ ಕರೆಗಳ ಡಿಟೇಲ್ಸ್ ಪೊಲೀಸರಿಗೆ ನೀಡುತ್ತಾರೆ. ಆಗ ಶುರುವಾಗುವುದೇ ಅಸಲಿ ಆಟ.

ಪೊಲೀಸರ ಸಲಹೆಯಂತೆ ಬಾಲಕಿ ತಂದೆ ಸುರೇಶ್ ಹಣ ಕೊಡಲು ಒಪ್ಪಿಗೆ ನೀಡಿ ಯಾವ ಸ್ಥಳಕ್ಕೆ ಬರಬೇಕು ಎಂದು ಕೇಳಿದಾಗ ಪೀಣ್ಯದಲ್ಲಿ ಸ್ಥಳ ನಿಗಧಿಯಾಗಿರುತ್ತದೆ. ಹಣ ನೀಡಿದ ಬಳಿಕ ನಾಗಭೂಷನ್ ಬಾಲಕಿಯನ್ನು ಭಾಷಮ್ ಸರ್ಕಲ್‌ನ ಹೋಟೆಲ್ ಬಳಿ ಬಿಟ್ಟು ಹೋಗುವುದಾಗಿ ಹೇಳಿರುತ್ತಾರೆ. ಈ ಬಗ್ಗೆ ಮೋಕ್ಷಿತಾ ಪೈಗೆ ನಾಗಭೂಷಣ್ ಮೆಸೇಜ್ ಕೂಡ ಕಳುಹಿಸಿರುತ್ತಾರೆ. ಬಳಿಕ ಹಣ ಪಡೆಯುವ ಸ್ಥಳವನ್ನು ಚೇಂಜ್ ಮಾಡುತ್ತಾರೆ ನಾಗಭೂಷಣ್. ನೈಸ್ ರಸ್ತೆ ಜಂಕ್ಷನ್ ಬಳಿ ಹಣವನ್ನು ಕಲೆಕ್ಟ್ ಮಾಡಿಕೊಳ್ಳುವುದಾಗಿ ಸುರೇಶ್‌ಗೆ ಹೇಳುತ್ತಾರೆ. ಮಧ್ಯ ರಾತ್ರಿ 1 ಗಂಟೆಗೆ ಸಮಯ ನಿಗಧಿಯಾಗುತ್ತದೆ. ಆಗ ನಾಗಭೂಷನ್ ಸುರೇಶ್ ಅವರ ಬಳಿ ಹಣ ಪಡೆಯಲು ಹೋದಾಗ ಅಲ್ಲಿ ಮೂರು ಪೊಲೀಸ್ ತಂಡಗಳು ಆತನನ್ನು ಬಂಧಿಸುತ್ತಾರೆ. ಇತ್ತ ಐಶ್ವರ್ಯ ಪೈ ಅಲಿಯಾಸ್ ಮೋಕ್ಷಿತಾ ಪೈ ಕೂಡ ಸಿಕ್ಕಿಹಾಕಿಕೊಳ್ಳುತ್ತಾರೆ.

ಬಳಿಕ ನಾಗಭೂಷಣ್ ಹಾಗೂ ಐಶ್ವರ್ಯ ಅವರಿಗೆ ಬಂದ ಮೆಸೇಜ್ ಆಧಾರ ಮೇಲೆ ಐಶ್ವರ್ಯ ಪೈಯನ್ನು ಪೊಲೀಸರು ಬಂಧಿಸುತ್ತಾರೆ. ಇದೇ ವಿಚಾರಕ್ಕೆ ಐಶ್ವರ್ಯ ಪೈ ಜೈಲಿಗೆ ಹೋಗಿ ಬರುತ್ತಾರೆ. ಇದಾದ ಬಳಿಕ ಈಕೆ ತನ್ನ ಹೆಸರನ್ನು ಮೋಕ್ಷಿತಾ ಪೈ ಎಂದು ಬದಲಾಯಿಸಿಕೊಳ್ಳುತ್ತಾಳೆ. ಈ ಬಗ್ಗೆ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಆಗಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್‌ (Deccan Herald)ನಲ್ಲಿ 2014ರ ಮಾರ್ಚ್‌ 14ರಂದು ಸುದ್ದಿ ಪ್ರಕಟವಾಗಿತ್ತು ಎನ್ನಲಾಗಿದೆ.

Edited By : Vijay Kumar
PublicNext

PublicNext

09/12/2024 10:02 pm

Cinque Terre

33.2 K

Cinque Terre

1