ನವದೆಹಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಅಲ್ಲದೇ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜುಬೈರ್ ಸಲ್ಲಿಸಿರುವ ಅರ್ಜಿ ಮೇಲೆ ಯುಪಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಇನ್ನು 2018ರಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪದಡಿ ಜುಬೇರ್ ನನ್ನು ಬಂಧಿಸಲಾಗಿತ್ತು.
ಸದ್ಯ ಮೊಹಮ್ಮದ್ ಜುಬೇರ್ ಗೆ ಸುಪ್ರೀಂಕೋರ್ಟ್ ಕೆಲವು ದಿನಗಳಿಗೆ ಮಧ್ಯಂತರ ಜಾಮೀನು ಅನುಮತಿಸಿದೆ. ಜುಬೇರ್ ಪರ ವಾದಿಸಿದ ಹಿರಿಯ ವಕೀಲ ಕೊಲೀನ್ ಗೋನ್ಸ್ಲೇವ್ಸ್, ಜುಬೇರ್ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲ ಎಂದು ವಾದಿಸಿದ್ದಾರೆ. ಈ ಪ್ರಕರಣ ದಾಖಲಿಸಿದ್ದು ಒಂದು ಟ್ವೀಟ್ ನ ಆಧಾರದ ಮೇಲೆ. ಪೊಲೀಸರ ವಿಚಾರಣೆ ಅಥವಾ ನ್ಯಾಯಾಂಗ ಬಂಧನ ಈಗ ಅಪ್ರಸ್ತುತ ಆಗಿರುವುದರಿಂದ ನಾವು ಈ ಪ್ರಕ್ರಿಯೆಯನ್ನು ರದ್ದು ಮಾಡಲು ಬಯಸುತ್ತೇವೆ ಎಂದಿದ್ದಾರೆ.
ದೇಶ ಎಲ್ಲಿಗೆ ಬಂದಿದೆ ನೋಡಿ, ಸುಳ್ಳುಗಳನ್ನು ಬಹಿರಂಗಡಿಸುವ ವ್ಯಕ್ತಿಯೊಬ್ಬರು ಜೈಲಿನಲ್ಲಿದ್ದು ಜಾಮೀನಿಗಾಗಿ ಕಾಯಬೇಕಿದೆ. ದ್ವೇಷ ಪ್ರಚೋದನೆ ಮಾಡುವವರು ಸಂವಿಧಾನ ಮತ್ತು ನ್ಯಾಯಾಧೀಶರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಜುಬೇರ್ ಅವರು ಇಂಥಾ ವಿಷ ಕಾರುವವರನ್ನು ಬಹಿರಂಗ ಪಡಿಸಿದ್ದಾರೆ. ಆದರೆ ಇದಕ್ಕಾಗಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ ಎಂದ ಗೋನ್ಸ್ಲೇವ್ಸ್ ಹೇಳಿದ್ದಾರೆ.
PublicNext
08/07/2022 01:38 pm