ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

26 ವರ್ಷಗಳಿಂದ ಖಜಾನೆಯಲ್ಲಿ ಕೊಳೆಯುತ್ತಿದೆ ಜಯಲಲಿತಾ ಒಡವೆ, ಬಟ್ಟೆಗಳು- ಹರಾಜಿಗಾಗಿ ಸುಪ್ರೀಂಗೆ ಪತ್ರ

ಬೆಂಗಳೂರು: ಒಂದು ಕಾಲದ ಗ್ಲಾಮೆರ್ ಗೊಂಬೆ, ಕಾಲಿವುಡ್ ಮೋಸ್ಟ್ ಬ್ಯುಟಿಫುಲ್ ನಟಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾರಾಜಿಸಿದ ದಿವಂಗತ ಜಯಲಲಿತಾ ಬಳಸುತ್ತಿದ್ದ ಸೀರೆ, ಚಪ್ಪಲಿ, ವಾಚ್ ವಿಧಾನಸೌಧ ಖಜಾನೆಯಲ್ಲಿ ದೂಳುಹಿಡಿಯುತ್ತಿವೆ.

ಅಕ್ರಮ ಆಸ್ತಿಗಳಿಕೆ ಆರೋಪದಡಿ ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿ 26 ವರ್ಷಗಳೇ ಕಳೆದಿದೆ.‌ ಅಕ್ರಮ ಆಸ್ತಿ ಸಂಬಂಧ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಜಯಲಲಿತಾ ವಿಚಾರಣೆ ನಡೆದಿತ್ತು. 26 ವರ್ಷದ ಹಿಂದೆ ಜಯಲಿತಾ ಮನೆಯಲ್ಲಿ ಜಪ್ತಿ ಮಾಡಿದ ಜಯಲಲಿತಾಗೆ ಸಂಬಂಧಿಸಿದ ವಸ್ತುಗಳನ್ನ ಸೀಜ್ ಮಾಡಿ ವಿಧಾನಸೌಧದಲ್ಲಿರುವ ಖಜಾನೆಯಲ್ಲಿ ಇಡಲಾಗಿದೆ. ಇನ್ನೂ ವಿಧಾನಸೌಧ ಖಜಾನೆಯಲ್ಲಿ ಜಯಲಲಿತಾ ಬಳಸುತ್ತಿದ್ದ ಬೆಲೆಬಾಳುವ ಸೀರೆ, ವಾಚ್, ಚಪ್ಪಲಿ ಸೇರಿದಂತೆ‌ ಇನ್ನಿತರ ವಸ್ತುಗಳನ್ನು ಹರಾಜು‌ ಹಾಕಲು‌ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಪತ್ರ ಬರೆದಿದ್ದಾರೆ.

2016ರಲ್ಲಿ ಜಯಲಲಿತಾ ಮೃತರಾಗಿದ್ದಾರೆ. 1996ರಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 11,344 ಸೀರೆಗಳು, 750 ಜೊತೆ ಚಪ್ಪಲಿ, 250 ಶಾಲುಗಳು ಸೇರಿದಂತೆ ಪಿಠೋಪಕರಣ ಹಾಗೂ ಫರ್ನಿಚರ್ ಗಳನ್ನು‌ ಜಪ್ತಿ ಮಾಡಿಕೊಂಡಿದ್ದರು. ಮುಟ್ಟುಗೋಲು ಹಾಕಿ 26 ವರ್ಷ ಸವೆದರೂ ಖಜಾನೆಯಲ್ಲಿ ದೂಳು ತಿನ್ನುತ್ತಿವೆ. ಈ ನಿಟ್ಟಿನಲ್ಲಿ ಜಪ್ತಿಯಾದ ವಸ್ತುಗಳನ್ನು ಹರಾಜಿಗೆ ಒಳಪಡಿಸಿ ಅಭಿಮಾನಿಗಳು ಹಾಗೂ ಬೆಂಬಲಿಗರು ಖರೀದಿಸುತ್ತಾರೆ.‌ ಈ ಮೂಲಕ‌ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದು ನರಸಿಂಹಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

1996 ರಲ್ಲಿ ಸಿಬಿಐ ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದರು. 1997 ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 11,344 ಸೀರೆಗಳು, 750 ಜೊತೆ ಚಪ್ಪಲಿ, 250 ಶಾಲುಗಳು, ಎಸಿ ಮಿಷನ್ 44, ಸೂಟ್ ಕೇಸ್ 131, ಟೆಲಿಪೋನ್ 33, ಗೋಡೆ ಗಡಿಯಾರ 27, ಫ್ಯಾನ್ 86, ಡೆಕೋರೇಟ್ ಚೇರ್ಸ್ 146, ಟೆಪಾಯಿ 34, ಟೇಬಲ್ 31, ಕಾಟ್ಸ್ 34, ಡ್ರೆಸಿಂಗ್ ಟೇಬಲ್ 09, ಹ್ಯಾಂಗಿಂಗ್ ಲೈಟ್ಸ್ 81, ಸೋಫಾ ಸೇಟ್ 20, ಡ್ರೆಸಿಂಗ್‌‌ ಮಿರರ್ ಟೇಬಲ್ 31 ಹಾಗೂ ಕ್ರಿಸ್ಟಲ್ ಕಟ್ ಗ್ಲಾಸೆಸ್ 231, ಐರನ್ ಲಾರ್ಕಸ್ 03, ಪ್ರಿಡ್ಜ್ 12, ಟೆಲಿವಿಷನ್ ಸೆಟ್ 10, ವಿಡಿಯೊ ಕ್ಯಾಮೆರಾ 04, ಟೇಪ್ ರೆಕಾರ್ಡರ್ 24 ಹಾಗೂ 1040 ವಿಡಿಯೊ ಕ್ಯಾಸೆಟ್ ಜಪ್ತಿ ಮಾಡಿಕೊಳ್ಳಲಾಗಿತ್ತು. ಅಲ್ಲದೆ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಿ ವಿಧಾನಸೌಧದ ಖಜಾನೆಯಲ್ಲಿ ಇಡಲಾಗಿತ್ತು.

Edited By : Shivu K
PublicNext

PublicNext

27/06/2022 11:19 pm

Cinque Terre

124.72 K

Cinque Terre

3

ಸಂಬಂಧಿತ ಸುದ್ದಿ