ದಾವಣಗೆರೆ: ಅಪಘಾತ ಪ್ರಕರಣದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿ ಸಿ ಬಸ್ ಅನ್ನು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಜಪ್ತಿ ಮಾಡಲಾಯಿತು.ಮೂರು ವರ್ಷಗಳ ಹಿಂದೆಯೇ ಅಪಘಾತ ಸಂಬಂಧ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶ ಹೊರಡಿಸಿತ್ತು. ಆದರೂ ಕೆ. ಎಸ್. ಆರ್. ಟಿ. ಸಿ. ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಪಘಾತ ಆಗಿದ್ದ ಬಸ್ ಅನ್ನೇ ಕೋರ್ಟ್ ಸಿಬ್ಬಂದಿ ಸೀಜ್ ಮಾಡಿದ್ದಾರೆ.
ಘಟನೆ ಹಿನ್ನೆಲೆ ಏನು...? .
2017 ರ ಏಪ್ರಿಲ್ 1 ರಂದು ರಾಣೆಬೆನ್ನೂರಿನಲ್ಲಿ ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ದಾವಣಗೆರೆಯ ನಂಜುಂಡಸ್ವಾಮಿ ಸೇರಿ ಇಬ್ಬರು ಸಾವು ಕಂಡಿದ್ದರು. ಪರಿಹಾರ ನೀಡುವಂತೆ ಕೋರಿ ಮೃತ ನಂಜುಂಡಸ್ವಾಮಿ ಪತ್ನಿ ಸುಮಾ ದಾವಣಗೆರೆಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ವಾದ - ಪ್ರತಿವಾದ ಆಲಿಸಿದ ಕೋರ್ಟ್ ಸುಮಾ ಪರ 2019 ಮೇ 1 ರಲ್ಲಿ 1 ಕೋಟಿ 18 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿದ್ದ ಕೆಎಸ್ಆರ್ ಟಿಸಿ ಸಂಸ್ಥೆಯು ಕೋರ್ಟ್ ಆದೇಶ ಪಾಲಿಸಿರಲಿಲ್ಲ. ಪರಿಹಾರ ನೀಡದ ಬೆನ್ನಲ್ಲೇ 14 ಲಕ್ಷ ರೂಪಾಯಿಯಷ್ಟು ಬಡ್ಡಿ ಹೆಚ್ಚಾಗಿದೆ. ಇದು ಸೇರಿ ಒಟ್ಟು 1 ಕೋಟಿ 32 ಲಕ್ಷ ರೂಪಾಯಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಪರಿಹಾರ ಪಾವತಿಸದ ಕಾರಣಕ್ಕೆ ಬಸ್ ಅನ್ನು ತಮ್ಮ ಸುಪರ್ದಿಗೆ ಕೋರ್ಟ್ ಸಿಬ್ಬಂದಿ ತೆಗೆದು ಕೊಂಡಿದ್ದಾರೆ.
PublicNext
17/06/2022 05:56 pm