ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಎಸ್ ಡಿಪಿಐ ಸಮಾವೇಶ ಮುಂದೂಡಿಕೆ; ನಾಳೆ ರಾತ್ರಿ 10 ಗಂಟೆವರೆಗೆ 144 ಸೆಕ್ಷನ್ ಜಾರಿ

ದಾವಣಗೆರೆ: ಮಹಮ್ಮದ್ ಪೈಗಂಬರ್ ಕುರಿತು ನಿಂದನಾತ್ಮಕ ಹೇಳಿಕೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೂನ್ 12ರಂದು ಎಸ್ ಡಿಪಿಐ ಹಮ್ಮಿಕೊಂಡಿದ್ದ ಬೃಹತ್ ಜನಾಧಿಕಾರ ಸಮಾವೇಶ ಮುಂದೂಡಲಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಸಂಜೆ 6 ಗಂಟೆಯಿಂದ ನಾಳೆ ರಾತ್ರಿ 10ರ ವರೆಗೆ 144 ನೇ ಸೆಕ್ಷನ್ ಜಾರಿಗೊಳಿಸಲಾಗಿದೆ.

ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಬೇರೆ ಕಡೆಗಳಲ್ಲಿ ಹಿಂಸಾಚಾರ- ಗಲಾಟೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂಘಟಕರು ಮತ್ತು ಮುಸ್ಲಿಂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಿದ್ದೇವೆ. ಇದಕ್ಕೆ ಅವರೂ ಸಹ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸಮಾವೇಶ ನಡೆಸಿ. ಸದ್ಯಕ್ಕೆ ನಡೆಸುವುದು ಬೇಡ. ಶಾಂತಿಗೆ ಧಕ್ಕೆ ಬರುವ ಕಾರಣ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅವರೂ ಸಹ ಕಾರ್ಯಕ್ರಮ ರದ್ದುಪಡಿಸಿದ ರೀತಿಯಲ್ಲಿ ಆದೇಶ ಮಾಡಿದ್ದಾರೆ. ಸರ್ಕಲ್ ಇನ್ ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿಯು ಎಸ್ ಡಿಪಿಐ ಆಯೋಜಿಸಿದ್ದ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಪಡೆದಿದ್ದರು. ಅವರ ಸಂಘಟಕರ ಜೊತೆ ಸಂಪರ್ಕದಲ್ಲಿದ್ದೇವೆ.

ಸಂಘಟಕರಿಂದಲೇ ಬೇರೆ ದಿನಾಂಕದಂದು ಸಮಾವೇಶ ನಡೆಸುವುದಾಗಿ ತಿಳಿಸಿ ಎಂದು ಹೇಳಿದ್ದೆವು. ಅದನ್ನು ಅವರೂ ಮಾಡಿದ್ದಾರೆ. ತುಂಬಾ ಸೂಕ್ಷ್ಮ ವಿಚಾರ ಆದ ಕಾರಣ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಬಂದೋಬಸ್ತ್ ಕೂಡ ಮಾಡಿದ್ದೇವೆ.

ಯಾವ್ಯಾವ ಜಿಲ್ಲೆಗಳಿಂದ ಸಮಾವೇಶಕ್ಕೆ ಆಗಮಿಸುವವರು ಇದ್ದರೋ ಅವರಿಗೆ ವಿಷಯ ತಿಳಿಸುವ ಕೆಲಸ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಮಾಹಿತಿ ಕೊಡಲಾಗಿದೆ. ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಮಾಡಿ ಅಲ್ಲಿಗೆ ಬರುವವರಿಗೆ ಸಮಾವೇಶ ಮುಂದೂಡಿರುವ ಕುರಿತಂತೆ ಹೇಳುತ್ತೇವೆ. ಇದಕ್ಕೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

Edited By : Manjunath H D
PublicNext

PublicNext

11/06/2022 06:06 pm

Cinque Terre

51.18 K

Cinque Terre

1

ಸಂಬಂಧಿತ ಸುದ್ದಿ