ಬೆಳಗಾವಿ: ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ಶಿಕ್ಷಕರೊಬ್ಬರ ಕೊರಳಪಟ್ಟಿ ಹಿಡಿದು ಸಾರ್ವಜನಿಕವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಗಳಖೋಡ ಪಟ್ಟಣದ ನಿವಾಸಿ ಸರ್ಕಾರಿ ಶಾಲೆಯ ಶಿಕ್ಷಕ ಚಂದ್ರು ಲಮಾಣಿ ಎಂಬುವರ ಹಾರೋಗೇರಿಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಖೋತ ದರ್ಪತೋರಿಸಿದ್ದಾರೆ. ಶಿಕ್ಷಕ ಚಂದ್ರು ಶರ್ಟ್ ಪಟ್ಟಿ ಹಿಡಿದು ರಸ್ತೆಯಲ್ಲೇ ಎಳೆದುಕೊಂಡು ಹೋಗಿದ್ದಾರೆ. ಶಿಕ್ಷಕನನ್ನು ಎಳೆದೊಯ್ಯುವಾಗ ಪೊಲೀಸ್ ಅಧಿಕಾರಿಗೆ ಜನರು ಮತ್ತು ಮಹಿಳೆಯರು ತರಾಟೆ ತೆಗೆದುಕೊಂಡಿದ್ದಾರೆ.
ಏನಿದು ಪ್ರಕರಣ?:
ಮುಗಳಖೋಡ ಪಟ್ಟಣದಲ್ಲಿ ದೇವಸ್ಥಾನದ ಖಾಲಿ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಕಾಂಪೌಂಡ್ ಮಾಡುತ್ತಿರುವ ಜಾಗ ತಮಗೆ ಸೇರಿದ್ದು, ಸೂಕ್ತ ತನಿಖೆ ನಡೆಸಿ ಕಾಮಗಾರಿ ಆರಂಭಿಸುವಂತೆ ಚಂದ್ರು ಲಮಾಣಿ ಈಗಾಗಲೇ ಪಿಡಬ್ಲ್ಯೂಡಿ ಇಲಾಖೆ ಸಹಾಯಕ ಇಂಜಿನಿಯರ್ಗೆ ಪತ್ರ ಬರೆದಿದ್ದಾರಂತೆ. ಆದಾಗ್ಯೂ ಪೊಲೀಸರ ಸಮ್ಮುಖದಲ್ಲಿ ಕಾಮಗಾರಿ ಪ್ರಾರಂಭ ಮಾಡಿದ್ದಕ್ಕೆ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪಿಎಸ್ಐ ಶಿಕ್ಷಕನ ಮೇಲೆ ದರ್ಪ ತೋರಿದ್ದಾರೆ ಎಂದು ತಿಳಿದುಬಂದಿದೆ.
PublicNext
06/05/2022 07:00 pm