ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಾದಾತ್ಮಕ ಪೋಸ್ಟ್ ಆರೋಪ: ದಲಿತ ಹೋರಾಟಗಾರ ಹಾರೋಹಳ್ಳಿ ರವೀಂದ್ರ ಅರೆಸ್ಟ್

ಮೈಸೂರು: ದಲಿತ ಹೋರಾಟಗಾರ ಹಾಗೂ ಬರಹಗಾರ ರವೀಂದ್ರ ಹಾರೋಹಳ್ಳಿ ಅವರನ್ನು ಜಿಲ್ಲೆಯ ಚಿಕ್ಕೋಡಿ ಠಾಣೆಯ ಪೊಲೀಸರು ಮೈಸೂರಿನ ಹಾರೋಹಳ್ಳಿಯಲ್ಲಿ ಇಂದು (ಶುಕ್ರವಾರ) ಬಂಧಿಸಿದ್ದಾರೆ.

ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೋಹಳ್ಳಿಯಲ್ಲಿರುವ ರವೀಂದ್ರ ಅವರ ಮನೆಯಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಹಾರೋಹಳ್ಳಿ ರವೀಂದ್ರ 2017ರ ಡಿಸೆಂಬರ್‌ನಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಈ ವಿಚಾರವಾಗಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ಅವರು 2019ರಿಂದಲೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಾರೆಂಟ್ ಜಾರಿಯಾಗಿತ್ತು ಎಂದು ತಿಳಿದು ಬಂದಿದೆ.

ಚಿಕ್ಕೋಡಿ ಪಟ್ಟಣದ ಪ್ರಭುವಾಡಿ ನಿವಾಸಿ ಚಂದ್ರಶೇಖರ ಮುಂಡೆ ಎನ್ನುವವರು ಚಿಕ್ಕೋಡಿ ಠಾಣೆಯಲ್ಲಿ ನೀಡಿದ್ದ ದೂರು ಆಧರಿಸಿ ರವೀಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು.

Edited By : Vijay Kumar
PublicNext

PublicNext

29/04/2022 08:55 pm

Cinque Terre

27.48 K

Cinque Terre

4

ಸಂಬಂಧಿತ ಸುದ್ದಿ