ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಹಿಂಬದಿ ಸೀಟ್‌ ನಲ್ಲಿ ಕುಳಿತರೇ ಬೀಳುತ್ತೆ ಲಾಠಿ ಏಟು !

ಕೇರಳ: ಪಾಲಕ್ಕಾಡ್ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಟಫ್ ರೂಲ್ಸ್ ತರಲಾಗಿದೆ. ಇಲ್ಲಿ ಬೈಕ್‌ ಸವಾರರು ಡಬಲ್ ರೈಡಿಂಗ್ ಮಾಡೋ ಹಾಗಿಲ್ಲ. ಒಬ್ಬರೇ ಬೈಕ್‌ ನಲ್ಲಿ ಸವಾರಿ ಮಾಡಬೇಕು. ಹಾಗೇನಾದ್ರೂ ಆದ್ರೆ, ಹಿಂದೆ ಕುಳಿತವರಿಗೆ ಸರಿಯಾಗಿಯೇ ಲಾಠಿ ಏಟು ಬೀಳುತ್ತದೆ. ಬಳಿಕ ಫೈನ್ ಕೂಡ ಹಾಕಲಾಗುತ್ತದೆ.

ಹೌದು. ಇಲ್ಲಿ ಈಗ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಇದಕ್ಕೆ ಬಲವಾದ ಕಾರಣವೂ ಇದೆ. RSS ಮಾಜಿ ಜಿಲ್ಲಾ ಕಾರ್ಯದರ್ಶಿಯನ್ನ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿಯ (SDPI) ಗುಂಪೊಂದು ಹತ್ಯೆ ಮಾಡಿತ್ತು. ಇದನ್ನ ಪ್ರತೀಕಾರದ ಹತ್ಯೆ ಅಂತಲೂ ಹೇಳಾಗುತ್ತಿದೆ.

ಆದರೆ, ಬೈಕ್ ಸವಾರರಿಗೂ ಈ ಕೊಲೆಗೂ ಏನ್ ಸಂಬಂಧ ಅಂತಲೇ ನೀವು ಈಗ ಕೇಳಬಹುದು. ನಿಜ, ಕೊಲೆ ಮಾಡಿದ ಮೂವರು ಬೈಕ್ ಏರಿಯೇ ಬಂದಿದ್ದರು. ಈ ಹಿನ್ನೆಲೆಯಲ್ಲಿಯೇ ಕೇರಳದಲ್ಲಿ ಏಪ್ರಿಲ್-20 ಸಂಜೆ ವರೆಗೂ ಬೈಕ್ ಸವಾರರಿಗೆ ಹಲವು ನಿರ್ಬಂಧಗಳನ್ನ ಹೇರಲಾಗಿದೆ. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಮಣಿಕಂದನ್ ಆದೇಶ ಹೊರಡಿಸಿದ್ದಾರೆ. ಆದರೆ, ಮಕ್ಕಳು ಹಾಗೂ ಮಹಿಳೆಯರಿಗೆ ಈ ನಿರ್ಬಂಧದಲ್ಲಿ ಸಡಿಲಿಕೆ ನೀಡಲಾಗಿದೆ.

Edited By :
PublicNext

PublicNext

18/04/2022 04:47 pm

Cinque Terre

20.6 K

Cinque Terre

0

ಸಂಬಂಧಿತ ಸುದ್ದಿ