ಲಕ್ನೋ: ಬಿಜೆಪಿಗೆ ಮತ ಹಾಕಿರುವುದಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬರಿಗೆ ಪತಿಯ ಮನೆಯವರು ಥಳಿಸಿ, ತಲಾಕ್ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯ ಪೊಲೀಸ್ ಠಾಣಾ ವ್ಯಾಪ್ತಿಯ ಎಜಾಜ್ ನಗರದಲ್ಲಿ ಈ ಘಟನೆ ನಡೆದಿದೆ. ಉಜ್ಮಾ ಎಂಬ ಮಹಿಳೆ ಬಿಜೆಪಿಗೆ ಮತ ಹಾಕಿದ್ದಾಳೆಂಬ ಕಾರಣಕ್ಕಾಗಿ ಆಕ್ರೋಶಗೊಂಡಿರುವ ಗಂಡನ ಮನೆಯವರು ಮಹಿಳೆಯನ್ನು ಥಳಿಸಿ ಹೊರ ಹಾಕಿದ್ದಾಳೆ. ಇದರ ಜೊತೆಗೆ ವಿಚ್ಛೇದನ (ತ್ರಿವಳಿ ತಲಾಖ್) ನೀಡುವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಈ ಬೆನ್ನಲ್ಲೇ ಸಂತ್ರಸ್ತೆ, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಹೋದರಿ ಫರ್ಹತ್ ನಖ್ವಿ ಅವರನ್ನ ಭೇಟಿ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
PublicNext
21/03/2022 10:49 pm