ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರ್ಚುವಲ್ ವಿಚಾರಣೆಗೆ ಅರೆಬೆತ್ತಲೆ ಹಾಜರಾಗಿದ್ದ ವ್ಯಕ್ತಿಗೆ ಹೈಕೋರ್ಟ್ ಕ್ಷಮಾದಾನ

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣ ಕುರಿತಾಗಿ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹೈಕೋರ್ಟ್ ವಿಚಾರಣೆ ನಡೆಸುವ ವೇಳೆ ವ್ಯಕ್ತಿಯೊಬ್ಬರು ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದರು. ಶರ್ಟ್ ಧರಿಸದೇ ವಿಚಾರಣೆಗೆ ಹಾಜರಾದ ವ್ಯಕ್ತಿ ಬಗ್ಗೆ ವಕೀಲರು ಆಕ್ಷೇಪಿಸಿದ ಕಾರಣ, ಹೈಕೋರ್ಟ್ ಗರಂ ಆಗಿತ್ತು. ಈ ಬಳಿಕ ಅಚಾತುರ್ಯದಿಂದ ಆದಂತ ಘಟನೆ ಅಂತ ವ್ಯಕ್ತಿ ಕೋರ್ಟ್‌ಗೆ ಬೇಷರತ್ ಕ್ಷಮೆ ಕೇಳಿದ ಕಾರಣದಿಂದ, ಇಂದು ಶ್ರೀಧರ್ ಭಟ್‌ಗೆ ಹೈಕೋರ್ಟ್ ಕ್ಷಮಾದಾನ ನೀಡಿದೆ.

ನವೆಂಬರ್ 30, 2021ರಂದು ಹೈಕೋರ್ಟ್ ನ್ಯಾಯಪೀಠವು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಪ್ರಕರಣ ಸಂಬಂಧ ಶ್ರೀಧರ್ ಭಟ್ ಎಂಬುವರು, ಶರ್ಟ್ ಧರಿಸದೇ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತ ಪಡಿಸಿದ್ದರು.

ಈ ಸಂಬಂಧ ಇಂದು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠದ ಮುಂದೆ ಶ್ರೀಧರ್ ಭಟ್, ಅಚಾತುರ್ಯದಿಂದ ನಡೆದಂತ ಘಟನೆಯಾಗಿದೆ. ತಮ್ಮ ತಪ್ಪನ್ನು ಕ್ಷಮಿಸುವಂತೆ ಬೇಷರ್ ಕ್ಷಮೆ ಯಾಚಿಸಿದರು. ಈ ಹಿನ್ನಲೆಯಲ್ಲಿ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಸಮ್ಮತಿಯ ಮೇರೆಗೆ ಹೈಕೋರ್ಟ್ ನ್ಯಾಯಪೀಠವು ಮುಂದೆ ಹೀಗೆ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ, ಕ್ಷಮಾದಾನ ನೀಡಿದೆ. ಈ ಮೂಲಕ ಶ್ರೀಧರ್ ಭಟ್ ಗೆ ಬಿಗ್ ರಿಲೀಫ್ ನೀಡಿದೆ.

Edited By : Nagaraj Tulugeri
PublicNext

PublicNext

03/02/2022 03:45 pm

Cinque Terre

32.74 K

Cinque Terre

0

ಸಂಬಂಧಿತ ಸುದ್ದಿ