ಮೈಸೂರು: ಪೋಷಕರ ವಿರೋಧದ ನಡುವೆ ಮಗಳು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದು ರೊಚ್ಚಿಗೆದ್ದ ತಂದೆ ಮಗಳ ಜುಟ್ಟು ಹಿಡಿದು ಎಳೆದಾಡಿ, ತಾಳಿ ಕಿತ್ತು ಬಿಸಾಡಿದ ಸಿನಿಮೀಯ ರೀತಿಯ ಘಟನೆ ನಂಜನಗೂಡು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆದಿದೆ.
ಹರತಲೆ ಗ್ರಾಮದ ಚೈತ್ರ ಹಲ್ಲರೆ ಗ್ರಾಮದ ಮಹೇಂದ್ರನನ್ನ ಪ್ರೀತಿಸಿ ಡಿಸೆಂಬರ್ 8 ರಂದು ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರಲ್ಲದೇ ಅಪ್ಪನ ಮೇಲೆ ಮಗಳು ದೂರು ಕೂಡ ನೀಡಿದ್ದಳು. ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸುವ ವೇಳೆ ತಂದೆ ಬಸವರಾಜ ನಾಯಕ್ ಎಂಟ್ರಿಯಾಗಿ ಮಗಳ ಜುಟ್ಟು ಹಿಡಿದು ಎಳೆದಾಡಿ ರಂಪಾಟ ಮಾಡಿ ಮದುವೆಯನ್ನು ವಿರೋಧಿಸಿದ್ದಾರೆ.
PublicNext
21/12/2021 11:34 am