ಬೆಂಗಳೂರು:ರಮೇಶ್ ಜಾರಕಿಹೊಳೆ ಬಹಿರಂಗ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಗ್ ರಿಲೀಫ್ ಸಿಕ್ಕಿದೆ.ಪೊಲೀಸ್ ಆಯುಕ್ತರ ವಿರುದ್ಧದ ಕೇಸ್ ರದ್ದು ಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠದ ಮಹತ್ವದ ಆದೇಶ ಹೊರಡಿಸಿದೆ.
ಪೊಲೀಸ್ ಆಯುಕ್ತ ಕಮಲ್ ಪಂತ್,ಡಿಸಿಪಿ ಎಂ.ಎನ್.ಅನುಚೇತ್,ಇನ್ಸ್‌ಪೆಕ್ಟರ್ ಮಾರುತಿ ಬಿ ವಿರುದ್ಧದ ಕೇಸ್ ಅನ್ನ
ಹೈಕೋರ್ಟ್ ರದ್ದುಗೊಳಿಸಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಆಗಿಯೇ ಇಲ್ಲ ಅಂತಲೇ ಆದರ್ಶ ಅಯ್ಯರ್ ಖಾಸಗಿ ದೂರು ದಾಖಲಿಸಿದ್ದರು.
ಈಗಾಗಲೇ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದೆ.ಕಾನೂನು ಪ್ರಕಾರವಾಗಿಯೇ ತನಿಖೆ ನಡೆಸಲಾಗಿದೆ.ಅಂತಿಮ ವರದಿ ಸಲ್ಲಿಸಲು ಕೋರಲಾಗಿದೆ. ಈ ಸಂಬಂಧ ಹೈಕೋರ್ಟ್ ಗೂ ಅರ್ಜಿ ಸಲ್ಲಿಸಲಾಗಿದೆ.
ಹೀಗಾಗಿ 8 ನೇ ಎಸಿಎಂಎಂ ಕೋರ್ಟ್ ಆದೇಶ ರದ್ದಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಎಸ್ಐಟಿ ಪರ ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧದ ತನಿಖೆ ರದ್ದಾಗಿದ್ದು, ಹೈಕೋರ್ಟ್ ಏಕಸದಸ್ಯ ಪೀಠದ ಈಗ ಮಹತ್ವದ ಆದೇಶ ಹೊರಡಿಸಿದೆ.
PublicNext
14/12/2021 06:08 pm