ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಹಿಳಾ ಸಿಬ್ಬಂದಿ ಜತೆ ಚೆಲ್ಲಾಟ; ವೈದ್ಯಾಧಿಕಾರಿಗೆ ಜಾಮೀನು

ಮಂಗಳೂರು: ಕಚೇರಿಯೊಳಗೆ ಹಲವು ಮಹಿಳಾ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡಿ ಬಂಧನಕ್ಕೊಳಗಾಗಿದ್ದ ವೈದ್ಯಾಧಿಕಾರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕುಷ್ಠರೋಗ ನಿವಾರಣಾಧಿಕಾರಿ, ಆಯುಷ್ಮಾನ್ ವಿಭಾಗದ ನೋಡಲ್ ಅಧಿಕಾರಿ ಡಾ.ರತ್ನಾಕರ್, ಕಚೇರಿಯ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಚೆಲ್ಲಾಟವಾಡಿರುವ ಫೋಟೊ, ವೀಡಿಯೋ ವೈರಲ್ ಆಗಿತ್ತು. ಆ ಬಳಿಕ ಡಾ.ರತ್ನಾಕರ್ ಮೇಲೆ ದಾಖಲಾಗಿರುವ ದೂರಿನ ಆಧಾರದಲ್ಲಿ ಬಂಧನಕ್ಕೊಳಗಾಗಿದ್ದ. ಆತ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಈ ಹಿಂದೆಯೇ ಮಾಹಿತಿ‌ ಇದ್ದುದ್ದರಿಂದ ಇಲಾಖಾ ಆಂತರಿಕ ಸಮಿತಿ ತನಿಖೆ ನಡೆಸಿ ಆತನನ್ನು ಅಮಾನತು ಮಾಡಿತ್ತು.

ಮಹಿಳಾ ಸಿಬ್ಬಂದಿಯೊಂದಿಗಿದ್ದ ಫೋಟೊ, ವೀಡಿಯೊ ಬಯಲಿಗೆ ಬಂದ ಬಳಿಕ ದೂರನ್ನು ಸ್ವೀಕರಿಸಿದ ಪೊಲೀಸರು ಬಂಧಿಸಿದ್ದರು. ಬಂಧನದಲ್ಲಿರುವ ಡಾ.ರತ್ನಾಕರ್ ಗೆ ಜಾಮೀನು ಮಂಜೂರು ಮಾಡುವಂತೆ ಆತನ ವಕೀಲರು ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿರುವ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Edited By :
PublicNext

PublicNext

29/11/2021 08:29 pm

Cinque Terre

48.57 K

Cinque Terre

3

ಸಂಬಂಧಿತ ಸುದ್ದಿ