ಬೆಂಗಳೂರು: ಮೊನ್ನೆಯಷ್ಟೇ ಎಸಿಬಿ ಅಧಿಕಾರಿಗಳು ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಮತ್ತೊಮ್ಮೆನಾಲ್ಕು ಸಬ್ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ.
ಎಚ್ ಎಸ್ ಆರ್ ಲೇಔಟ್,ವಿಜಯನಗರ, ಆರ್ ಟಿ ನಗರ ,ಬನಶಂಕರಿ ಬಿಡಿಎ ಕಚೇರಿಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ. ಅಲ್ಲದೇ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ.
ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದಾಗ ಸಬ್ ಕಚೇರಿಗಳಿಗೆ ಸಂಬಂಧಿಸಿದ ಅಕ್ರಮ ಕೆಲ ದಾಖಲೆಗಳು ಪತ್ತೆಯಾಗಿತ್ತು
ಹಾಗೂ ಕೆಲ ಮಹತ್ವದ ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸದ್ಯ ಕಚೇರಿ ಗೇಟ್ ಗೆ ಬೀಗ ಹಾಕಿ ಯಾರನ್ನೂ ಹೊರ ಬಿಡದೆ ಹುಡುಕಾಟ ನಡೆಸಲಾಗುತ್ತಿದೆ.ಬಿಡಿಎ ಕಚೇರಿ ಮೇಲೆ ದಾಳಿ ಆದ ಬಳಿಕ ಎಸಿಬಿ ಗೆ 30ಕ್ಕೂ ಹೆಚ್ಚು ದೂರು ಬಂದಿತ್ತು, ಅದ್ರಲ್ಲಿ ಸುಮಾರು 20 ದೂರುಗಳು ಈ ನಾಲ್ಕು ಬಿಡಿಎ ಕಚೇರಿಗಳದ್ದೇ ಆಗಿದ್ದವು.
ದೂರುದಾರರ ಬಳಿಯೇ ಮಾಹಿತಿ ಹಾಗೂ ದಾಖಲೆಗಳನ್ನು ಎಸಿಬಿ ಕಲೆಹಾಕಿದ್ದರು.
ದಾಖಲೆಗಳ ಪರಿಶೀಲನೆ ಬಳಿಕ ಇಂದು ಮುಂಜಾನೆ ಮೀಟಿಂಗ್ ಮಾಡಿ ಬಳಿಕ ಸರ್ಚ್ ವಾರೆಂಟ್ ಪಡೆದು ನಾಲ್ಕು ವಿಶೇಷ ತಂಡಗಳೊಂದಿಗೆ ನಾಲ್ಕು ಕಚೇರಿ ಮೇಲೆಯೂ ಏಕ ಕಾಲದಲ್ಲಿ ದಾಳಿ ಮಾಡಿದ್ದಾರೆ.
ಸದ್ಯ ಕಚೇರಿಯಲ್ಲಿ ಕೆಲಸ ಮಾಡ್ತಿರೋ ಅಧಿಕಾರಿಗಳ
ಮೊಬೈಲ್ ವಶಕ್ಕೆ ಪಡೆದು ದಾಖಲೆಗಳ ಪರಶೀಲನೆ ನಡೆಸಲಾಗುತ್ತಿದೆ.
PublicNext
23/11/2021 04:25 pm