ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರು ಫಿನಿಶ್

ಶ್ರೀನಗರ: ಕಾಶ್ಮೀರದ ಕುಲ್ಗಾಮ್ʼನ ಪೊಂಬಾಯಿ ಮತ್ತು ಗೋಪಾಲ್ ಪೋರಾದಲ್ಲಿ ಭಾರತೀಯ ಸೈನಿಕರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತ್ಯೇಕ ಎನ್ ಕೌಂಟರ್ʼಗಳಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆಂಟ್ ಫ್ರಂಟ್‌ನ ಉನ್ನತ ಕಮಾಂಡರ್, ಮೋಸ್ಟ್‌ ವಾಂಟೆಡ್ ಆಗಿದ್ದ ಉಗ್ರ ಅಫಾಕ್ ಸಿಕಂದರ್ ಸೇರಿದಂತೆ ಐವರು ಭಯೋತ್ಪಾದಕರನ್ನು ಸೈನಿಕರು ಗುಂಡಿಟ್ಟು ಫಿನಿಶ್ ಮಾಡಿದ್ದಾರೆ.

ಸಾವನ್ನಪ್ಪಿದ ಇತರ ನಾಲ್ವರು ಭಯೋತ್ಪಾದಕರಲ್ಲಿ ಒಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ. ಆದ್ರೆ, ಇತರರನ್ನ ಶಕೀರ್ ಆಲಿಯಾಸ್ ಅಮಾರ್, ಹೈದರ್ ಆಲಿಯಾಸ್ ಅಸ್ಲಾಂ ಟೈಗರ್ ಮತ್ತು ಇಬ್ರಾಹಿಂ ಎಂದು ಗುರುತಿಸಲಾಗಿದೆ. ಇವರೆಲ್ಲ ದಕ್ಷಿಣ ಕಾಶ್ಮೀರದವರಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

Edited By : Nagaraj Tulugeri
PublicNext

PublicNext

17/11/2021 10:03 pm

Cinque Terre

23.81 K

Cinque Terre

14

ಸಂಬಂಧಿತ ಸುದ್ದಿ