ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ನಿಮ್ಮನ್ನು ಜೈಲಿಗೆ ಹಾಕಿದ್ರೆ ಗೊತ್ತಾಗುತ್ತೆ"; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ

ಬೆಂಗಳೂರು: ಅಕ್ರಮ ಕಟ್ಟಡಗಳ ವಿಚಾರದಲ್ಲಿ ಬಿಬಿಎಂಪಿ ವಹಿಸುತ್ತಿರುವ ವ್ಯಾಪಕ ಹಾಗೂ ದಿವ್ಯ ನಿರ್ಲಕ್ಷ್ಯವನ್ನು ಹೈಕೋರ್ಟ್ ಅತಿ ಕಟುವಾಗಿ ಖಂಡಿಸಿದೆ.

ಕೋರ್ಟ್ ಬಗ್ಗೆಯಾಗಲಿ, ಈ ಗೌರವಯುತವಾದ ಪೀಠದಲ್ಲಿ ಕುಳಿತು ಸೂಚನೆ-ಆದೇಶ ನೀಡುವವರ ಬಗ್ಗೆ ಕಿಂಚಿತ್ತೂ ಹೆದರಿಕೆಯಿಲ್ಲದಂತಿರುವ ನಿಮ್ಮಗಳ ಧೋರಣೆ ಸರಿಯಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಖಂಡಿಸಿದ್ದಾರೆ.

ಅಷ್ಟೇ ಅಲ್ಲ, ನಿಮ್ಮಲ್ಲಿ ಯಾರಾದರೂ ಒಂದಿಬ್ಬರನ್ನು ಜೈಲಿಗೆ ಕಳುಹಿಸಿದ ಮೇಲಾದ್ರೂ ಎಚ್ಚೆತ್ತುಕೊಂಡು ಸರಿಯಾಗಿ ಕೆಲಸ ಮಾಡುತ್ತಿರೇನೋ ಎನ್ನುವಂಥ ಎಚ್ಚರಿಕೆಯನ್ನೂ ಮುಖ್ಯ ನ್ಯಾಯಮೂರ್ತಿಗಳು ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳು ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಕೋರ್ಟ್ ನೀಡುತ್ತಿರುವ ಆದೇಶ-ಸೂಚನೆ ಬಗ್ಗೆ ಬಿಡಿಎ-ಬಿಬಿಎಂಪಿಗೆ ಕೊಂಚವೂ ಹೆದರಿಕೆಯಾಗಲಿ, ಅಂಜಿಕೆಯಾಗಲಿ ಇಲ್ಲ.

ಪಾರ್ಕ್ ಹಾಗೂ ಮೈದಾನಗಳಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳ ಬಗ್ಗೆ ವರದಿ ಸಲ್ಲಿಸಿ ಎಂದು ಹೇಳಿದ ಮೇಲೂ ಸರ್ವೆ ವರದಿ ಸಲ್ಲಿಸದಿರುವ ಉದ್ಧಟತನವನ್ನೂ ಖಂಡಿಸಿದ್ದಾರೆ. ಈ ವೇಳೆ ಬಿಡಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

10/11/2021 11:02 am

Cinque Terre

22.15 K

Cinque Terre

6

ಸಂಬಂಧಿತ ಸುದ್ದಿ