ದೆಹಲಿ:ರೈತರು ಕೃಷಿ ಕಾನೂನು ವಿರೋಧಿಸಿ ಈಗಾಗಲೇ ಹೋರಾಟ ನಡೆಸಿದ್ದಾರೆ. ಆದರೆ ದೆಹಲಿ ಮತ್ತು ಹರಿಯಾಣ ರಸ್ತೆಯ ಟಿರ್ಕಿ ಗಡಿಯಲ್ಲಿ ಹಾಕಲಾಗಿದ್ದ ಪೊಲೀಸ್ ಬ್ಯಾರಿಕೇಡ್ ಗಳನ್ನ ಜೆಸಿಬಿ ಮೂಲಕ ಈಗ ತೆರವುಗೊಳಿಸಲಾಗುತ್ತಿದೆ. ಇಷ್ಟೇ ಅಲ್ಲ ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿರೋ ಘಾಜಿಪುರದಿಂದಲೂ ಪೊಲೀಸ್ ಬ್ಯಾರಿಕೇಡ್ ತೆಗೆದುಹಾಕಲಾಗಿದೆ.ರೈತರು ಹೋರಾಟ ಮಾಡಬಹುದು ಆದರೆ ಅನಿರ್ದಿಷ್ಟ ಕಾಲ ರಸ್ತೆ ತಡೆ ಮಾಡೋ ಹಾಗಿಲ್ಲ ಅಂತಲೇ ಸುಪ್ರಿಂ ಕೋರ್ಟ್ ಹೇಳಿತ್ತು. ಅಲ್ಲಿಗೆ ರೈತರು ವರ್ಷಾನುಗಟ್ಟಲೆ ನಡೆಸುತ್ತಿದ್ದ ಹೋರಾಟಕ್ಕೆ ಈಗ ಫುಲ್ ಸ್ಟಾಪ್ ಬಿತ್ತಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
PublicNext
29/10/2021 11:46 am