ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಕಾಪುರ ಠಾಣೆಯಲ್ಲಿ ಜನ್ಮದಿನಾಚರಣೆ : ಪಿಎಸ್ಐಗೆ ಸಸ್ಪೆಂಡ್ ಉಡುಗೊರೆ

ಹಾವೇರಿ: ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪಿಎಸ್ಐ ಸಂತೋಷ ಪಾಟೀಲ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಸಸ್ಪೆಂಡ್ ಕಾಣಿಕೆ ಕೊಟ್ಟಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ಯುವಕರ ಗುಂಪು ಪಿಎಸ್ಐ ಅವರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನಿಸಿ, ಹಾರ ಹಾಕಿ ಶಾಲು ಹೊದಿಸಿ ಅಭಿನಂದಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಇಲಾಖೆ ವಿಚಾರಣೆ ಕಾಯ್ದಿರಿಸಿ ಪಿಎಸ್ಐ ಅವರನ್ನು ಅಮಾನತುಗೊಳಿಸಿದ್ದಾರೆ.

ಸುತ್ತೋಲೆ ಹೊರಡಿಸಿದ 10 ದಿನಗಳಲ್ಲಿ ಡಿಜಿಪಿ ಆದೇಶ ಉಲ್ಲಂಘಿಸಿ, ಶಿಸ್ತುಕ್ರಮಕ್ಕೆ ಗುರಿಯಾದ ರಾಜ್ಯದ ಮೊದಲ ಪ್ರಕರಣ ಎಂದು 'ಬಂಕಾಪುರ ಪ್ರಕರಣ'ವನ್ನು ವಿಶ್ಲೇಷಿಸಲಾಗುತ್ತಿದೆಯಲ್ಲದೆ ಇತರ ಅಧಿಕಾರಿಗಳೂ ಎಚ್ಚರಿಕೆ ಗಂಟೆಯಾಗಿದೆ.

Edited By :
PublicNext

PublicNext

12/08/2021 07:46 pm

Cinque Terre

28.21 K

Cinque Terre

1

ಸಂಬಂಧಿತ ಸುದ್ದಿ