ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶಿಸಿದ್ದಾರೆ.
ನ್ಯಾಯಮೂರ್ತಿಗಳಾದ ಸಿಂಗಾಪುರಂ ರಾಘವಾಚಾರ್ ಕೃಷ್ಣಕುಮಾರ್, ಅಶೋಕ್ ಸುಭಾಷ್ ಚಂದ್ರ ಕಿಣಗಿ, ಸಚಿನ್ ಶಂಕರ್ ಮಗದುಮ್ ಹಾಗೂ ಸೂರಜ್ ಗೋವಿಂದ ರಾಜ್ ನೂತನವಾಗಿ ನೇಮಕವಾಗಿದ್ದಾರೆ. ಇವರೆಲ್ಲಾ ನ್ಯಾಯಾಂಗದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದು, ಶಾಶ್ವತವಾಗಿ ಕಾರ್ಯನಿರ್ವಹಿಸಲಿದ್ದಾರೆ.
PublicNext
22/02/2021 10:50 pm