ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WhatsApp ಗೆ ಸುಪ್ರೀಂಕೋರ್ಟ್ ನೋಟಿಸ್

ನವದೆಹಲಿ : ವಾಟ್ಸ್ ಆ್ಯಪ್ ನಲ್ಲಿ ಭಾರತೀಯರಿಗಿಂತ ಹೆಚ್ಚಿನ ಗೌಪ್ಯತೆಯನ್ನು ಯುರೋಪಿಯನ್ನರಿಗೆ ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಸರ್ಕಾರ ಮತ್ತು ವಾಟ್ಸ್ ಆ್ಯಪ್ ಗೆ ಸೂಚಿಸಿದೆ. ಹೊಸ ಗೌಪ್ಯತೆ ನೀತಿ ಬಗ್ಗೆ ವಾಟ್ಸ್ ಆ್ಯಪ್ ಗೆ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ನೀಡಿದೆ.

ಭಾರತದಲ್ಲಿ ಹೊಸ ಗೌಪ್ಯತಾ ನೀತಿ ಅನುಷ್ಠಾನಕ್ಕೆ ತರುವುದನ್ನು ತಡೆ ಹಿಡಿಯಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜನರು ಗೌಪ್ಯತೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಹಣಕ್ಕಿಂತಲೂ ನಾಗರಿಕರ ಗೌಪ್ಯತೆ ಮುಖ್ಯ . ಜನರು ಗೌಪ್ಯತೆ ಬಗ್ಗೆ ಆತಂಕಗೊಂಡಿದ್ದಾರೆ. ಅವರ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಾಧೀಶ ಎಸ್.ಎ. ಬೋಬಡೆ ಅವರ ನೇತೃತ್ವದ ನ್ಯಾಯಪೀಠವು ಕರ್ಮಣ್ಯ ಸಿಂಗ್ ಸರೀನ್ ಅವರ ಮನವಿ ವಿಚಾರಣೆ ನಡೆಸಿ ಸರ್ಕಾರ ಮತ್ತು ವಾಟ್ಸ್ ಆ್ಯಪ್ ಕಂಪನಿಗೆ ನೋಟಿಸ್ ನೀಡಿದೆ.

Edited By : Nirmala Aralikatti
PublicNext

PublicNext

15/02/2021 07:17 pm

Cinque Terre

58.94 K

Cinque Terre

3

ಸಂಬಂಧಿತ ಸುದ್ದಿ