ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಗಣರಾಜ್ಯೋತ್ಸವದಂದು ನಡೆಸಲು ಉದ್ದೇಶಿಸಿರುವ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿಗೆ ದೆಹಲಿ ಪೊಲೀಸರಿಂದ ಲಿಖಿತ ಅನುಮತಿ ಕೋರಿದ್ದಾರೆ. ದೆಹಲಿಯಾದ್ಯಂತ ಸುತ್ತುವರೆದಿರುವ ರಿಂಗ್ ರಸ್ತೆಯಲ್ಲಿ ನಡೆಯಲಿರುವ ರ್‍ಯಾಲಿಯಲ್ಲಿ ಲಕ್ಷಾಂತರ ಹೆಚ್ಚು ಟ್ರಾಕ್ಟರುಗಳು ಭಾಗವಹಿಸಲಿವೆ ಎನ್ನಲಾಗಿದೆ.
ರೈತರ ಟ್ರ್ಯಾಕ್ಟರ್ ರ್‍ಯಾಲಿಯಿಂದ ದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್‌ಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ರೈತರು ಈಗಾಗಲೇ ಹೇಳಿದ್ದಾರೆ. ಇಂದು ನಡೆಯುವ ಸಭೆಯ ನಂತರ ಪೊಲೀಸರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ರೈತರ ರ್‍ಯಾಲಿಯು ರಾಷ್ಟ್ರಕ್ಕೆ ಮುಜುಗರ ಉಂಟು ಮಾಡುತ್ತದೆ ಎಂದು ಆರೋಪಿಸಿ ರ್‍ಯಾಲಿಯನ್ನು ನಿಲ್ಲಿಸುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟನ್ನು ಸಂಪರ್ಕಿಸಿತ್ತು. ನ್ಯಾಯಾಲಯವು, ಇದು “ಕಾನೂನು ಮತ್ತು ಸುವ್ಯವಸ್ಥೆ” ಯ ವಿಷಯವಾಗಿದ್ದು, ರ್‍ಯಾಲಿಯ ಬಗೆಗಿನ ನಿರ್ಧಾರ ದೆಹಲಿ ಪೊಲೀಸರಿಗೆ ಬಿಟ್ಟಿದ್ದು ಎಂದು ಹೇಳಿತ್ತು.
PublicNext
24/01/2021 03:05 pm