ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಉಗ್ರರು ನಡೆಸಿದ 40 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯಕ್ಕಾಗಿ ಉಗ್ರರು 150 ಮೀಟರ್ ಸುರಂಗ ಮಾರ್ಗ ನಿರ್ಮಿಸಿದ್ದರು ಎನ್ನುವುದು ತಿಳಿದು ಬಂದಿದೆ.
ಈ ಬಗ್ಗೆ ಬಿಎಸ್‍ಎಫ್ ಇನ್‍ಸ್ಪೆಕ್ಟರ್ ಜನರಲ್ ಎನ್‍ಎಸ್ ಜಮ್ಮಾಲ್ ಅವರು, ಕಥುವಾದಲ್ಲಿ ಪಾಕಿಸ್ತಾನದ ಗಡಿ ಪ್ರದೇಶದ ಪಕ್ಕದಲ್ಲೇ ಸುರಂಗ ಮಾರ್ಗ ಪತ್ತೆ ಮಾಡಲಾಗಿದೆ. ಹಿರಾನಗರ ಸೆಕ್ಟರ್‍ನ ಬೊಬ್ಬಿಯಾನ್ ಗ್ರಾಮದಲ್ಲಿ 3 ಅಡಿ ಅಗಲ ಮತ್ತು 25ರಿಂದ 30 ಅಡಿ ಆಳದ ಸುರಂಗ ಮಾರ್ಗ ಪತ್ತೆ ಮಾಡಿದ್ದೇವೆ. ಇದು ಪಾಕಿಸ್ತಾನದಿಂದ ಭಾರತದ ಗಡಿ ಪ್ರದೇಶದೊಳಗೆ 20ರಿಂದ 30 ಮೀಟರ್‌ನ ಮುಳ್ಳು ತಂತಿಯ ನಡುವೆ ಹಾದು ಬಂದಿದೆ ಎಂದು ತಿಳಿಸಿದ್ದಾರೆ.
ಇದು ಬಿಎಸ್‍ಎಫ್ ಗಡಿ ಭದ್ರತಾ ಪಡೆ ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿ 6 ತಿಂಗಳ ಅಂತರದಲ್ಲಿ ಪತ್ತೆ ಹಚ್ಚಿದ ಮೂರನೇ ಸುರಂಗ ಮಾರ್ಗವಾಗಿದೆ. ಸೆಪ್ಟೆಂಬರ್‌ನಲ್ಲಿ ಅರ್ನಿಯಾ ಪ್ರದೇಶದಲ್ಲಿ ಇದ್ದ ಸುರಂಗ ಮಾರ್ಗವನ್ನು ಸೇನೆಯು ಪತ್ತೆ ಹಚ್ಚಿತ್ತು.
PublicNext
14/01/2021 03:19 pm