ಬೆಂಗಳೂರು- ರಾಜ್ಯದ 8 ಐಪಿಎಸ್ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಸಿಡಿಮಿಡಿಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ನಿರ್ಭಯಾ ಸೇಫ್ ಸಿಟಿ' ಟೆಂಡರ್ ರದ್ದು ವಿಚಾರವಾಗಿ ಒಂದು ವರ್ಷದ ಹಿಂದೆಯೇ ಹೇಮಂತ್ ನಿಂಬಾಳ್ಕರ್ ಮೇಲೆ ದೋಷಾರೋಪ ಸಲ್ಲಿಸಿ ದೂರು ನೀಡಿದ್ದೆ.
ಆದರೂ ಅವರ ಮೇಲೆ ಕ್ರಮ ಆಗಿಲ್ಲ. ಈ ವರ್ಗಾವಣೆಯಿಂದ ನನ್ನನ್ನೂ ಹಾಗೂ ದೋಷಾರೋಪಣೆ ಎದುರಿಸುತ್ತಿರುವ ಅವರನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತಾಗಿದೆ ಎಂದಿದ್ದಾರೆ.
ಗೃಹ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ಕರಕುಶಲ ನಿಗಮದ ಎಂ.ಡಿ ಹುದ್ದೆಗೆ ಡಿ. ರೂಪಾ ಅವರನ್ನು ವರ್ಗಾಯಿಸಲಾಗಿದೆ.
ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ನಡುವೆ ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಶೀತಲ ಸಮರ ನಡೆದಿತ್ತು. ನಂತರ ಬಹಿರಂಗ ಜಟಾಪಟಿಯೂ ನಡೆದಿತ್ತು.
PublicNext
01/01/2021 10:57 am