ನವದೆಹಲಿ : ಸ್ವತಂತ್ರ ಭಾರತ ಕಂಡ ಅತೀ ದೊಡ್ಡ ಬಿಕ್ಕಟ್ಟು, ಸುದೀರ್ಘ ರಕ್ತಚರಿತ್ರೆಗೆ, ಕೋಮುಗಳ ನಡುವಿನ ಅಪನಂಬಿಕೆಗೆ ಸಾಕ್ಷಿಯಾದ ಬಾಬರಿ- ಅಯೋಧ್ಯೆ ವಿವಾದದಲ್ಲಿ ಮುಖ್ಯಪಾತ್ರವಾಗಿರುವ ಬಾಬರಿ ಮಸೀದಿ ಧ್ವಂಸಗೊಳಿಸಿ ಸರಿಸುಮಾರು 28 ವರ್ಷಗಳೇ ಸಂದಿವೆ. ಇದೀಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಾಲಯ ತೀರ್ಪು ಸೆಪ್ಟೆಂಬರ್ 30ರಂದು ತೀರ್ಪು ನೀಡಲು ಲಕ್ನೋದ ಸಿಬಿಐ ಕೋರ್ಟ್ ಮುಂದಾಗಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಟ್ಟು 49 ಜನರು ಆರೋಪಿಗಳಿದ್ದು, ಎಲ್ಲಾ ಆರೋಪಿಗಳು ಖುದ್ದಾಗಿ ಕೋರ್ಟ್ ನಲ್ಲಿ ಹಾಜರಿರಬೇಕೆಂದು ಸಿಬಿಐ ವಿಶೇಷ ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರು ಈಗಾಗಲೇ ನಿರ್ದೇಶನ ನೀಡಿದೆ.
ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿರುವ ತೀರ್ಪಿನ ವೇಳೆ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಹಾಗೂ ಉಮಾ ಭಾರತಿ ಗೈರಾಗುವ ಸಾಧ್ಯತೆ ಇದೆ.
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿ ಸೇರಿದಂತೆ ಪ್ರಮುಖವಾಗಿ 13 ಮಂದಿ ಆರೋಪಿಗಳಿದ್ದಾರೆ. ಎಲ್ಲಾ 32 ಆರೋಪಿಗಳ ಹೇಳಿಕೆಯನ್ನು ಸಿಆರ್ ಪಿಸಿ ಸೆಕ್ಷನ್ 313 ಅಡಿಯಲ್ಲಿ ಕೋರ್ಟ್ ದಾಖಲಿಸುತ್ತಿದೆ. ವಿಶೇಷ ಜಡ್ಜ್ ಎಸ್. ಕೆ ಯಾದವ್ ಮುಂದೆ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯನ್ನು ಆರೋಪಿಗಳು ಎದುರಿಸಿದರು.
ಈಗ ತೀರ್ಪಿನ ದಿನಾಂಕದಂದು ತಮ್ಮ ವಯಸ್ಸು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಮುಂದಿಟ್ಟು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ನ್ಯಾಯಾಲಯವನ್ನು ಕೋರಬಹುದು ಎಂದು ಅವರ ಪರ ವಕೀಲ ಕೆ.ಕೆ. ಮಿಶ್ರಾ ತಿಳಿಸಿದ್ದಾರೆ. 32 ಆರೋಪಿಗಳ ಪೈಕಿ ಅಡ್ವಾಣಿ, ಜೋಶಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ 25 ಜನರನ್ನು ಕೆಕೆ ಮಿಶ್ರಾ ಅವರು ಪ್ರತಿನಿಧಿಸುತ್ತಿದ್ದಾರೆ.
ಉಮಾಭಾರತಿ ಅವರು ಈಗಾಗಲೇ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ, ಮುರಳಿ ಮನೋಹರ್ ಜೋಶಿಯವರು ಕೊರೋನಾ ಕಾರಣದಿಂದ ಹೊರ ಬರುವ ಸಾಧ್ಯತೆಗಳಿಲ್ಲ, ವಯಸ್ಸಿನ ಕಾರಣದಿಂದ ಅವರು ಕೋರ್ಟ್ ಗೆ ಬರುವುದು ಕೂಡಾ ಸೂಕ್ತವಲ್ಲ, ಇನ್ನು ಕಲ್ಯಾಣ್ ಸಿಂಗ್ ಕೂಡಾ ಕೊರೋನಾ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಸಾಧ್ವಿ ರಿತಂಬರಾ ಸೇರಿದಂತೆ 32 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ 25 ಜನ ಆರೋಪಿಗಳನ್ನು ನ್ಯಾಯವಾದಿ ಕೆಕೆ ಮಿಶ್ರಾ ಪ್ರತಿನಿಧಿಸುತ್ತಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ ಅನ್ನು ಮೊಘಲ್ ಚಕ್ರವರ್ತಿ ಬಾಬರ್ ದಂಡನಾಯಕ ಮಿರ್ ಬಾಕಿ ಆತನ ಚಕ್ರವರ್ತಿಯ ಆದೇಶದ ಮೇರೆಗೆ ನಿರ್ಮಿಸಿದ ಎಂದು ಹಲವಾರು ದಾಖಲೆಗಳು ಹೇಳುತ್ತವೆ. ಈ ಮಸೀದಿಯನ್ನು ದೇವಾಲಯ ಒಡೆದು ನಿರ್ಮಿಸಲಾಗಿದೆ ಎಂಬುದು ರಾಮಜನ್ಮಭೂಮಿ ವಕ್ತಾರರವಾದ.
2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ರಾಮ ಮಂದಿರ ಕುರಿತಂತೆ ನೀಡಿದ ತೀರ್ಪಿನ ಸಂದರ್ಭ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಿದ್ದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ಈ ಹೇಳಿಕೆಯು ಬಾಬ್ರಿ ಮಸೀದಿಪ್ರಕರಣದಲ್ಲಿ ಏನಾದರೂ ಪರಿಣಾಮ ಬೀರುತ್ತಾ ಎಂಬುದನ್ನು ಕಾದುನೋಡಬೇಕಿದೆ.
PublicNext
30/09/2020 07:59 am