ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಬ್ಬನ ಹೆಸರಿನಲ್ಲಿ 9 ಸಿಮ್‌ಗಳಿಗಿಂತ ಹೆಚ್ಚು ಸಿಮ್‌ಗಳಿದ್ರೆ ನಿಷ್ಕ್ರಿಯ

ನವದೆಹಲಿ: ಇನ್ನುಮುಂದೆ ವ್ಯಕ್ತಿಯೊಬ್ಬ ತನ್ನ ಹೆಸರಿನಲ್ಲಿ 9 ಸಿಮ್ ಕಾರ್ಡ್‌ ಮಾತ್ರ ಹೊಂದಲು ಸಾಧ್ಯ. ಇದಕ್ಕಿಂತ ಹೆಚ್ಚು ಆತನ ಹೆಸರಲ್ಲಿ ಇದ್ದರೆ ಅವುಗಳನ್ನು ಪರಿಶೀಲಿಸಿ ನಿಷ್ಕ್ರಿಯಗೊಳಿಸಲು ದೂರಸಂಪರ್ಕ ಇಲಾಖೆ (ಡಿಒಟಿ) ನಿರ್ಧರಿಸಿದೆ. ಇನ್ನು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಇರುವವರಿಗೆ ದೃಢೀಕರಿಸಿದ ಬಳಿಕ 6 ಸಿಮ್ ಕಾರ್ಡ್‌ಗಳನ್ನು ಇರಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ.

ಉಳಿಸಿಕೊಳ್ಳಬೇಕಾದ ಸಿಮ್ ಯಾವುದೆಂಬುದನ್ನು ಚಂದಾದಾರರ ಆಯ್ಕೆಗೆ ಬಿಡಲಾಗಿದೆ. ಯಾವುದನ್ನು ಡೀಆಕ್ಟಿವೇಟ್ ಮಾಡಬಹುದು ಎನ್ನುವುದನ್ನೂ ಅವರೇ ನಿರ್ಧರಿಸಬಹುದು ಎಂದು ಡಿ.7ರ ಆದೇಶ ತಿಳಿಸಿದೆ.

ಹೆಚ್ಚುತ್ತಿರುವ ಆರ್ಥಿಕ ಅಪರಾಧ, ಅನಪೇಕ್ಷಿತ ಕಿರಿಕಿರಿ ಕರೆಗಳು, ಸ್ವಯಂಚಾಲಿತ ಕರೆಗಳು ಮತ್ತು ವಂಚನೆಯ ಕರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಒಟಿ ಈ ಆದೇಶ ಹೊರಡಿಸಿದೆ.

Edited By : Vijay Kumar
PublicNext

PublicNext

10/12/2021 08:25 am

Cinque Terre

20.74 K

Cinque Terre

2

ಸಂಬಂಧಿತ ಸುದ್ದಿ