ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ದಾಂಪತ್ಯ ಸಮಸ್ಯೆ ಇಟ್ಟುಕೊಂಡು ಶ್ರೀಗಳ ಹೆಸರಿಗೆ ಕಳಂಕ ತರುವ ಪ್ರಯತ್ನ: ನೊಂದ ಮಹಿಳೆ ಅಳಲು

ದಾವಣಗೆರೆ: ನನ್ನ ಹಾಗೂ ಪತಿ ನಡುವೆ ವೈವಾಹಿಕ ಸಂಬಂಧ ಸರಿ ಇಲ್ಲ. ನಾನು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದೇನೆ. ಆದ್ರೆ, ಈಗ ಇದನ್ನೇ ಮುಂದಿಟ್ಟುಕೊಂಡು ಆವರಗೊಳ್ಳದ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಹೆಸರು ಬಳಸಿ ಅಪಪ್ರಚಾರ, ಅಪನಿಂದನೆ ಅವಹೇಳನಕಾರಿ ಸಂದೇಶ ಹರಿಬಿಡಲಾಗುತ್ತಿದೆ. ನನ್ನ ಹಾಗೂ ಶ್ರೀಗಳ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಸಂತ್ರಸ್ತ ಮಹಿಳೆ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ನನ್ನ ಪತಿ ನಡವಳಿಕೆ ಸರಿ ಇರಲಿಲ್ಲ. ನಿತ್ಯವೂ ಕುಡಿದು ಬಂದು ಪೀಡಿಸುತ್ತಿದ್ದ, ಹಿಂಸೆ ನೀಡುತ್ತಿದ್ದ. ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. 2015ರಲ್ಲಿ ಪ್ರೀತಿಸಿ ಚಂದ್ರಶೇಖರ್ ಎಂಬಾತನನ್ನು ವಿವಾಹವಾಗಿದ್ದೆ. ಮನೆ ಬಿಟ್ಟು ಹೋಗಿ ಅವರ ಜೊತೆ ಆರು ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದೆ. ಪ್ರೀತಿ ಮಾಡಿದ ತಪ್ಪಿಗೆ ಆತ ಕೊಟ್ಟ ಎಲ್ಲಾ ರೀತಿಯ ಕಾಟ ಸಹಿಸಿಕೊಂಡಿದ್ದೆ. ಯಾವುದೇ ದುಡಿಮೆ ಮಾಡದೇ ಸಾಲ ಮಾಡಿ ಎಲ್ಲರಿಗೂ ವಂಚಿಸುತ್ತಿದ್ದ ಎಂದು ಆರೋಪಿಸಿದರು.

ನನ್ನ ಗಂಡನ ದುಡ್ಡಿನ ಆಸೆ, ಅಮಲಿಗೆ ಬೇಸತ್ತು ಕಳೆದ ವರ್ಷದ ಹಿಂದೆಯೇ ದಾವಣಗೆರೆ ನ್ಯಾಯಾಲಯದಲ್ಲಿ ಡೈವೋರ್ಸ್ ಗೆ ಅರ್ಜಿ ಹಾಕಿದ್ದೇನೆ. ನಾಲ್ಕು ಬಾರಿ ಸಮನ್ಸ್ ಕೊಟ್ಟರೂ ಕೋರ್ಟ್ ಗೆ ಹಾಜರಾಗಿಲ್ಲ. ನನ್ನ ಖಾಸಗಿ ವಿಡಿಯೋ, ಫೋಟೋ ನನ್ನ ಬಳಿ ಇದ್ದು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ. ಬೆಂಗಳೂರಿನ ಖಾಸಗಿ ಯೂಟ್ಯೂಬ್ ಚಾನೆಲ್ ಮೂಲಕ ನನ್ನ ಚಾರಿತ್ರ್ಯಹರಣ ಮಾಡಲಾಗಿದೆ. ನನ್ನ ಪತಿ ಹಾಗೂ ಯೂಟ್ಯೂಬ್ ಚಾನೆಲ್ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದೇನೆ. ನಾನು ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಭಕ್ತೆ. ಅವರದ್ದು ನನ್ನದು ಗುರು, ಶಿಷ್ಯೆಯ ಸಂಬಂಧ. ಆವರಗೊಳ್ಳದ ಕೆಲವರು ಈ ದುಷ್ಕೃತ್ಯಕ್ಕೆ ಸಹಕರಿಸಿದ್ದಾರೆ ಎಂಬ ಮಾಹಿತಿ ಇದೆ. ಗುರುಗಳ ಹೆಸರು ಬಳಸಿಕೊಂಡು ಹಣ ಲಪಟಾಯಿಸಲು ನನ್ನ ಪತಿ ಹೂಡಿರುವ ಸಂಚು ಎಂದು ಬೇಸರ ವ್ಯಕ್ತಪಡಿಸಿದರು.

Edited By :
PublicNext

PublicNext

08/09/2022 06:25 pm

Cinque Terre

55.24 K

Cinque Terre

1

ಸಂಬಂಧಿತ ಸುದ್ದಿ