ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಉರುಸ್ ಆಚರಿಸಲು ಮುಸ್ಲಿಂ ಸಮುದಾಯ ನಿರ್ಧರಿಸಿದೆ. ಸದ್ಯ ಇಲ್ಲಿ ಜಾಮಿಯಾ ಮಸೀದಿ ವಿವಾದ ನಡೆಯುತ್ತಿದೆ. ಇದರ ನಡುವೆಯೇ ಉರುಸ್ ನಡೆಸುತ್ತಿರುವುದಕ್ಕೆ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಉರುಸ್ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ 30ರಿಂದ 40 ಸಾವಿರ ಜನ ಸೇರಲಿದ್ದಾರೆ. ಆದ್ರೆ ನಾವು ಶ್ರೀರಂಗಪಟ್ಟಣದಲ್ಲಿ ಮಂದಿರ ಚಲೋ ಚಳವಳಿ ಮಾಡಲು ನಿರ್ಧರಿಸಿದಾಗ 144 ಸೆಕ್ಷನ್ ಜಾರಿ ಮಾಡಿದ್ದರು. ಆ ವೇಳೆ ನಮಗೆ ಶ್ರೀರಂಗಪಟ್ಟಣ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆದ್ರೆ ಈಗ ಉರುಸ್‌ಗೆ ಹೇಗೆ ಅನುಮತಿ ಕೊಟ್ಟರು ಎಂಬುದು ಹಿಂದೂ ಸಂಘಟನೆಗಳ ಪ್ರಶ್ನೆಯಾಗಿದೆ.
ಇತ್ತ ಮುಸ್ಲಿಂ ಮುಖಂಡರು ನಾವು ಉರುಸ್ ಮಾಡೇ ಮಾಡ್ತೀವಿ ಎಂದು ಪಟ್ಟು ಹಿಡಿದಿದ್ದಾರೆ. ಇದು ನೂರಾರು ವರ್ಷಗಳಿಂದ ನಡೆದು ಬಂದ ಆಚರಣೆ. ಅದರಂತೆ ಈ ಬಾರಿಯೂ ನಡೆಯುತ್ತದೆ. ನಾವು ಶಕ್ತಿ ಪ್ರದರ್ಶನಕ್ಕಾಗಿ ಮಾಡುತ್ತಿಲ್ಲ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಅಲರ್ಟ್ ಆಗಿದ್ದಾರೆ.
PublicNext
28/06/2022 08:42 am