ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಅಮಲಿಹಾಳದಲ್ಲಿ ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ಪೋಲೀಸರ ಮಧ್ಯಸ್ಥಿಕೆ

ಯಾದಗಿರಿ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮಲಿಹಾಳ ಹಾಗೂ ಹೂವಿನಹಳ್ಳಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಆಂಜನೇಯ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಗ್ರಾಮದಲ್ಲಿ ದೇಗುಲ ಪ್ರವೇಶಿಸದಂತೆ ಮೇಲ್ವರ್ಗದವರು ಹಾಗೂ ಸಂಗನಗೌಡ, ರಾಜುಗೌಡ ಮತ್ತು ಇತರರು ತಡೆಯುತ್ತಾರೆ ಅಂತಾ ಶಿವಪುತ್ರ ಬಡಿಗೇರ್, ಭೀಮಪ್ಪ ಬಡಿಗೇರ್ ಇವರು ಕೆಂಭಾವಿ ಠಾಣೆಯಲ್ಲಿ ದೂರು ಬಂದು ನೀಡಿದ್ದರು.

ಈ ಬಗ್ಗೆ ಯಾದಗಿರಿ ಎಸ್‌ಪಿ ಡಾ. ಸಿಬಿ ವೇದಮೂರ್ತಿ ಮತ್ತು ಅಧಿಕಾರಿಗಳು ನಿನ್ನೆ ಗ್ರಾಮದಲ್ಲಿ ಶಾಂತಿ ಸಭೆಯನ್ನು ಕೈಗೊಂಡಿದ್ದರು. ಈ ಎರಡೂ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ ಇದ್ದು, ಆಂಜನೇಯ ದೇವಸ್ಥಾನದಲ್ಲಿ ದಲಿತರ ಪ್ರವೇಶಕ್ಕೆ ಅನ್ಯ ಸಮುದಾಯದ ಜನ ನಿರ್ಬಂಧಿಸಿದ್ದರು. ಇನ್ನು ಪೊಲೀಸರ ಭದ್ರತೆ ನಡುವೆ ಇಂದು ಪರಿಶಿಷ್ಟ ಜಾತಿ ಮಹಿಳೆಯರು ಹಾಗೂ ಭೀಮಪ್ಪ ಬಡಿಗೇರ ಕುಂಭ ಕಳಸ ಹೊತ್ತು ದೇಗುಲ ಪ್ರವೇಶ ಮಾಡಿ ಪೂಜೆ ಸಲ್ಲಿಸಿದರು.

ಅಲ್ಲದೇ ಗ್ರಾಮದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಅಮಲಿಹಾಳ ಹಾಗೂ ಹೂವಿನಹಳ್ಳಿಯಲ್ಲಿ ಪೊಲೀಸ ಭದ್ರತೆ ಒದಗಿಸಿ ಈ ಎರಡೂ ಗ್ರಾಮದಲ್ಲಿ 144 ಸೆಕ್ಷೆನ್ ಜಾರಿ ಮಾಡಲಾಗಿದೆ.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Nagesh Gaonkar
PublicNext

PublicNext

29/05/2022 03:47 pm

Cinque Terre

69.92 K

Cinque Terre

22

ಸಂಬಂಧಿತ ಸುದ್ದಿ