ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ. ವಾರಾಣಾಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ನ್ಯಾಯಾಲಯ ತಡೆ ನೀಡಿದೆ.
ಈ ನಡುವೆ ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೆಗೆ ವಾರಣಾಸಿಯ ಸಿವಿಲ್ ಕೋರ್ಟ್ ಅನುಮತಿ ನೀಡಿತ್ತು. ಮೇ.17ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆಯೂ ಆದೇಶಿಸಿತ್ತು. ವರದಿ ಸಲ್ಲಿಸಲು ಎರಡು ದಿನ ಸಮೀಕ್ಷೆ ಅಧಿಕಾರಿಗಳು ಕೋರಿಕೊಂಡ ಕಾರಣ, ಅವಕಾಶ ನೀಡಲಾಗಿತ್ತು. ಅದರಂತೆ ಇಂದು ಜ್ಞಾನವಾಪಿ ಮಸೀದಿಯ ಸಮೀಕ್ಷೆ ವರದಿಯನ್ನು ಕೋರ್ಟ್‌ಗೆ ಸರ್ವೆ ಅಧಿಕಾರಿಗಳು ಸಲ್ಲಿಸಿದ್ದಾರೆ. ಇಂದು ವಾರಣಾಸಿಯ ಸಿವಿಲ್ ಕೋರ್ಟ್‌ಗೆ ಮೇ.14ರಿಂದ 16ರವರೆಗೆ ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೆ ಕಾರ್ಯ ನಡೆಸಿದ್ದ ಸುಮಾರು 12 ಪುಟಗಳ ವರದಿಯನ್ನು ಸಲ್ಲಿಸಿದೆ.
ಕೋರ್ಟ್‌ಗೆ ಸಲ್ಲಿಸಿರುವ 12 ಪುಟಗಳ ವರದಿಯಲ್ಲಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ. 4 ದೇವರ ವಿಗ್ರಹದ ಮಾದರಿಯೂ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ ಎನ್ನಲಾಗಿದೆ. ಕೋರ್ಟ್ ಕಮಿಷನರ್ ವಿಶಾಲ್ ಸಿಂಗ್, ವಾರಣಾಸಿ ಸಿವಿಲ್ ಕೋರ್ಟ್‌ಗೆ ಸಮೀಕ್ಷೆ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯು ಈಗ ತೀವ್ರ ಕುತೂಹಲ ಮೂಡಿಸಿದೆ.
PublicNext
19/05/2022 01:18 pm